ಮುಲ್ಕಿ: ರಾ.ಹೆ. 66ರ ಮುಲ್ಕಿ ಕ್ಷೀರಸಾಗರದ ತಿರುವಿನಲ್ಲಿ ಸ್ವಿಪ್ಟ್ ಕಾರೊಂದು(ಕೆ ಎ 20 ಎಂ ಎ 5561) ಪಲ್ಟಿಯಾಗಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದು ಚಾಲಕ ಪವಾಡಸದೃಶವಾಗಿ ಪಾರಾಗಿದ್ದಾರೆ. ಗಾಯಾಳು ಚಾಲಕನನ್ನು ಸುರತ್ಕಲ್ ಕೃಷ್ಣಾಪುರ ಬಳಿ ನಿವಾಸಿ ಮೊಹಮ್ಮದ್ ಮುದಸ್ಸರ್ (23) ಎಂದು ಗುರುತಿಸಲಾಗಿದೆ. ಚಾಲಕ ಮುದಸ್ಸರ್ ಸುರತ್ಕಲ್ ಕೃಷ್ಣಾಪುರ ದಿಂದ ಹೆಜಮಾಡಿ ಕಡೆಗೆ ಬರುತ್ತಿರುವಾಗ ಮುಲ್ಕಿ ಸಮಿಪದ ಕ್ಷೀರಸಾಗರದ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸುಮಾರು 10 ಅಡಿ ಆಳದ ಹೊಂಡಕ್ಕೆ ಬಿದ್ದು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಭಾರಿ ಅನಾಹುತ ತಪ್ಪಿದೆ. ಅಪಘಾತದ ನಡೆದ ಕೂಡಲೇ ಸ್ಥಳದಲ್ಲಿ ಭಾರಿ ಶಬ್ದ ಉಂಟಾಗಿದ್ದು, ಸನಿಹದ ಮನೆಯವರು ಬಂದು ನೋಡುವಾಗ ಚಾಲಕ ಕಾರಿನಿಂದ ಪವಾಡಸದೃಶ ವಾಗಿ ಹೊರಗೆ ಬಂದಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆ. ಸುರತ್ಕಲ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅಪಘಾತ ವಲಯ ಎಚ್ಚರಿಕೆ ಫಲಕ ಅಳವಡಿಸಿ: ರಾ.ಹೆ. 66ರ ಮುಲ್ಕಿ ಕ್ಷೀರಸಾಗರದ ಬಳಿ ಹೆದ್ದಾರಿ ಅಗಲೀಕರಣ ನಡೆದ ಬಳಿಕ ಅವೈಜ್ಞಾನಿಕ ಕಾಮಗಾರಿ ಯಿಂದ ಹಲವು ಅಪಘಾತ ನಡೆದಿದೆ. ಈ ಸ್ಥಳದಲ್ಲಿ ಅಪಘಾತ ವಲಯದ ಎಚ್ಚರಿಕೆ ಫಲಕ ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
17/10/2020 04:39 pm