ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬಾಗಿಲು: ಹೆದ್ದಾರಿಯಲ್ಲಿ ಗಾಯಗೊಂಡು ಅಸ್ವಸ್ಥರಾಗಿದ್ದ ಮಹಿಳೆಯ ರಕ್ಷಣೆ

ಅಂಬಾಗಿಲು; ಪೋಲಿಸರು ನೀಡಿರುವ ಮಾಹಿತಿ ಮೇರೆಗೆ ಅಂಬಾಗಿಲು ಹೆದ್ದಾರಿಯಲ್ಲಿ ಗಾಯಾಳಾಗಿ ಬಿದ್ದುಕೊಂಡಿದ್ದ ಮಹಿಳೆಯನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ ಘಟನೆ ನಡೆದಿದೆ.

ಗಾಯಾಳು ಮಹಿಳೆ ಆಶಾ ಯಾನೆ ಲೀಲಾ ಪೆರಂಪಳ್ಳಿ (50 ) ಎಂದು ತಿಳಿದುಬಂದಿದೆ. ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ತುರ್ತಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

02/12/2021 01:27 pm

Cinque Terre

1.41 K

Cinque Terre

0