ಉಡುಪಿ: ಕಳೆದ ಆರು ತಿಂಗಳಿನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದ ಕೃಷ್ಣಮಠಕ್ಕೆ ಇಂದಿನಿಂದ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಎರಡು ಗಂಟೆಯಿಂದ ಐದರತನಕ ಮಾತ್ರ ದೇವರದರ್ಶನ ಮಾಡಬಹುದು.ಆದರೆ ಸದ್ಯ ಯಾವುದೇ ಸೇವೆಗಳಿಗೂ ಅವಕಾಶ ಇಲ್ಲ.
ಭಕ್ತರಿಗೆ ರಾಜಾಂಗಣ ಹಿಂಭಾಗದಿಂದ ಮಠಕ್ಕೆ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.ಸ್ಥಳೀಯ ಭಕ್ತರಿಗೆ ಪಾಸ್ ವಿತರಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ರಥಬೀದಿ ಎದುರಿನ ಮಾರ್ಗದಿಂದ ಮಠಕ್ಕೆ ಬರಬಹುದಾಗಿದೆ.ವಿವಿಧ ಸೇವೆಗಳು ಮತ್ತು ಮದ್ಯಾಹ್ಮದ ಊಟವನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಪ್ರಾರಂಭಿಸಲಾಗುತ್ತದೆ ಎಂದು ಮಠದ ಮೂಲಗಳು ತಿಳಿಸಿವೆ.
Kshetra Samachara
28/09/2020 07:40 am