ಮಲ್ಪೆ : ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಮಲ್ಪೆ ಕರಾವಳಿ ಕಾವಲು ಪೊಲೀಸ್ ಘಟಕದ ವತಿಯಿಂದ ಸಾರ್ವಜನಿಕರಿಗೆ ಇಂದು ಮಟ್ಟು ಬೀಚ್‌ನಿಂದ ಪಡುಕರೆ ಶ್ರೀ ಪಂಡರೀನಾಥ ಭಜನಾ ಮಂದಿರದವರೆಗೆ ಮೂರು ಕಿ.ಮೀ. ದೂರದ ವರೆಗೆ ಏಕತಾ ಓಟ ನಡೆಯಿತು.
ಮಟ್ಟು ಬೀಚ್‌ನಲ್ಲಿ ಏಕತಾ ಓಟಕ್ಕೆ ಚಾಲನೆ ನೀಡಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಸಮೃದ್ಧ ಭಾರತ ನಿರ್ಮಾಣಕ್ಕೆ ಯುವ ಸಮುದಾಯ ಸಜ್ಜಾಗಬೇಕು.
ಅದೇ ರೀತಿ ಮಾದಕ ದ್ರವ್ಯದ ವಿರುದ್ದ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.
ಮಲ್ಪೆ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಆರ್.ಚೇತನ್ ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿದರು.
ಓಟದಲ್ಲಿ ಉಡುಪಿ ಪೊಲೀಸ್ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳು, ಯುನೈಟೆಡ್ ಅಥ್ಲೆಟಿಕ್ಸ್, ಟ್ರ್ಯಾಕ್ ಆ್ಯಂಡ್ ಫೀಲ್ಡ್, ಸ್ಟೇಡಿಯಂ ಸ್ಪ್ಲಿಂಟರ್ಸ್, ನೇಶನ್ ಫಸ್ಟ್ ಅಥ್ಲೆಟ್ಸ್‌ನ ಸದಸ್ಯರು, ಪಿಪಿಸಿ ವಿದ್ಯಾರ್ಥಿಗಳು, ಕರಾವಳಿ ಕಾವಲು ಪೊಲೀಸ್ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 350 ಮಂದಿ ಭಾಗವಹಿಸಿದರು.
Kshetra Samachara
31/10/2020 06:58 pm