ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಆರು ಜನ ವಿದ್ಯಾರ್ಥಿನಿಯರು ಟೆರರಿಸ್ಟ್ ಗಳು - ಕಾಲೇಜು ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ!

ಹಿಜಾಬ್ ಗಾಗಿ ಕೋರ್ಟ್ ಮೊರೆ ಹೋಗಿ, ಕೋರ್ಟ್ ತೀರ್ಪು ಬಂದ ನಂತರವೂ ಕೋರ್ಟ್ ತೀರ್ಪಿಗೆ ಅಸಮಾಧಾನ ತೋರಿಸುತ್ತಿರುವ ವಿದ್ಯಾರ್ಥಿನಿಯರು ಕೇವಲ ವಿದ್ಯಾರ್ಥಿನಿಯರಲ್ಲ, ಅವರು ಟೆರರಿಸ್ಟ್ ಗಳು ಎಂದು ಉಡುಪಿ ಸರಕಾರಿ ಕಾಲೇಜಿನ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಆಚರಣೆ ಮಾಡಲು ಬೇರೆ ದೇಶಕ್ಕೆ ಹೋಗಲಿ‌. ಇಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಹೈಕೋರ್ಟ್ ತೀರ್ಪು ಸಂವಿಧಾನಬದ್ಧವಾಗಿ ,ಅಂಬೇಡ್ಕರ್ ಅವರ ಆಶಯದಂತೆ ಬಂದಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಸರಕಾರಿ ಕಾಲೇಜಿನಲ್ಲಿ ಹಿಂದೆ ಇದ್ದ ನಿಯಮಗಳು ಮುಂದುವರಿಯಲಿವೆ.ನಿಯಮ ಪಾಲನೆ ಮಾಡುವವರು ಕಾಲೇಜಿಗೆ ಬರಬಹುದು ಎಂದು ಹೇಳಿದ್ದಾರೆ.

Edited By :
Kshetra Samachara

Kshetra Samachara

16/03/2022 12:29 pm

Cinque Terre

6.99 K

Cinque Terre

3

ಸಂಬಂಧಿತ ಸುದ್ದಿ