ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಕರ್ತನ ಮೇಲೆ ಡಿವೈ ಎಸ್ ಪಿ ದೌರ್ಜನ್ಯ ಪ್ರಕರಣ: ಸೂಕ್ತ ಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಸೂಚನೆ

ಕಾರ್ಕಳ: ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯೊಂದರ ಕುರಿತಾಗಿ ಪರಿಶಿಷ್ಟ ಪಂಗಡದ ಪತ್ರಕರ್ತನ ಮೇಲೆ ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ ತಮ್ಮ ಕಚೇರಿಯಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಲವಂತವಾಗಿ ಮೊಬೈಲ್ ಕಸಿದುಕೊಂಡು ಬೆದರಿಕೆಯೊಡ್ಡಿದ ಪ್ರಕರಣ ಕುರಿತಂತೆ ಸಲ್ಲಿಸಲಾಗಿದ್ದ ದೂರಿಗೆ ಸಂಬಂಧಿಸಿ ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಈ ಪ್ರಕರಣದ ಬಗ್ಗೆ ಕಾರ್ಕಳ ಡಿವೈ ಎಸ್ ಪಿ ವಿರುದ್ಧ ಬಂದಿರುವ ದೂರಿನ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಎಸ್ಪಿಯವರಿಗೆ ಸೂಚನೆ ನೀಡಿದ್ದಾರೆ.

ಪರಿಶಿಷ್ಟ ಸಮುದಾಯದ ವ್ಯಕ್ತಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ ತನಿಖಾಧಿಕಾರಿಯೇ ನ್ಯಾಯ ಕೇಳಲು ಹೋಗುವ ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆಸುವುದು ಎಷ್ಟು ಸರಿ? ಈ ಕುರಿತು ನ್ಯಾಯ ಒದಗಿಸಬೇಕೆಂದು ಪತ್ರಕರ್ತ ಕೃಷ್ಣ ನಾಯ್ಕ್ ಎಲ್ಲ ಇಲಾಖೆಗಳಿಗೆ ಪತ್ರ ಬರೆದಿದ್ದರು.

ಇದಲ್ಲದೆ, ಉಡುಪಿ ಜಿಲ್ಲಾ ಮರಾಠಿ ಸಂಘಟನೆ ಕೂಡ ಈ ಪ್ರಕರಣದ ಕುರಿತು ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.

Edited By : Nirmala Aralikatti
Kshetra Samachara

Kshetra Samachara

23/11/2020 01:54 pm

Cinque Terre

7.46 K

Cinque Terre

0

ಸಂಬಂಧಿತ ಸುದ್ದಿ