ಉಡುಪಿಯಲ್ಲಿ ಕೆ ಎ ಎಸ್ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ಮಾಡಲಾಗಿದೆ.ಜೈವಿಕ & ತಂತ್ರಜ್ಞಾನ ಅಡಳಿತಾಧಿಕಾರಿ ಡಾ ಸುಧಾ ಮನೆ ಮೇಲೆ ದಾಳಿ ಮಾಡಲಾಗಿದ.
ಹೆಬ್ರಿ ತೆಂಕಬೆಟ್ಟು ಸೇರಿದಂತೆ ರಾಜ್ಯದ 6 ಕಡೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಎಸಿಬಿ ಅಧಿಕಾರಿಗಳು ಯಲಹಂಕ ,ಕೊಡ್ಗಿಹಳ್ಳಿ .ಬಿ ಇ ಎಂ ಎಲ್ ಬ್ಯಾಟರಯನಪುರದ , ಶಾಂತಿನಗರದಲ್ಲಿ ದಾಳಿ ನಡೆಸಲಾಗಿದೆ.
ಈ ವೇಳೆ ಅಪಾರ ಪ್ರಮಾಣದ ಚಿನ್ನ ವಶ ಪಡಿಸಿಕೊಳ್ಳಲಾಗಿದೆ. ಅಕ್ರಮ ಅಸ್ತಿ ಅವ್ಯವಾಹಾರ ಅರೋಪದ ಮೇಲೆ ರೇಡ್ ಮಾಡಲಾಗಿದೆ.
ಉಡುಪಿಯಲ್ಲಿ ಈ ಹಿಂದೆ ಭೂ ಸ್ವಾಧೀನಧಿಕಾರಿಯಾಗಿದ್ದ ಡಾ.ಸುಧಾ ಜೊತೆಗೆ ಪರಿಚಯಸ್ಥರು ಕುಟುಂಬಸ್ಥರ ಮನೆ ಮೇಲೂ ದಾಳಿ ನಡೆಸಲಾಗಿದೆ.
Kshetra Samachara
07/11/2020 11:04 am