ಉಚ್ಚಿಲ: ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯ, ಚಿತ್ರಹಿಂಸೆ, ಹತ್ಯೆ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಚ್ಚಿಲ ವತಿಯಿಂದ ಉಚ್ಚಿಲ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಮಾತನಾಡಿದ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಹನೀಫ್ ಮುಳೂರು, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಹಿಟ್ಲರ್ ಮಾದರಿ ಆಡಳಿತ ನಡೆಸುತ್ತಿದ್ದಾರೆ.
ಆರೋಪಿಗಳು ಮೋದಿ ಮತ್ತು ಯೋಗಿಯ ಆಪ್ತರಾಗಿದ್ದು, ಅವರಿಗೆ ರಕ್ಷಣೆ ನೀಡಲಾಗುತ್ತಿವೆ. ಅಲ್ಲಿರುವ ಕಬ್ಬು, ಕೃಷಿ ತೋಟಗಳು ಮೇಲ್ವರ್ಗದವರಿಗೆ ಬಂಡವಾಳಶಾಹಿಗಳಿಗೆ ಮತ್ತು ಕೋಮುವಾದಿಗಳಿಗೆ ಲೈಂಗಿಕ ದೌರ್ಜನ್ಯದ ಗದ್ದೆಗಳಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಇಲ್ಲಿರುವ ಹಿಂದೂ ಕ್ರೈಸ್ತ ಮುಸಲ್ಮಾನರನ್ನು ಒಗ್ಗೂಡಿಸಿ ಅನ್ಯಾಯದ ವಿರುದ್ದ ಎಸ್ಡಿಪಿಐ ಧ್ವನಿ ಎತ್ತಲಿದೆ ಎಂದರು.
ಎಸ್ಡಿಪಿಐ ಮುಖಂಡ ಮಜೀದ್ ಪೊಲ್ಯ ಮಾತನಾಡಿ, ಆರೋಪಿಗಳನ್ನು ಗಲ್ಲಿಗೆ ಏರಿಸಬೇಕು ಎಂದರು, ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಎಸ್ಡಿಪಿಐ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.
Kshetra Samachara
08/10/2020 07:36 pm