ಉಡುಪಿ: ಉಡುಪಿ ಕಲ್ಸಂಕ ಜಂಕ್ಷನ್ ಬಳಿ ಅತೀ ಹೆಚ್ಚು ವಾಹನ ದಟ್ಟಣೆ ಇರುವುದರಿಂದ ವಾಹನಗಳ ಸುಸಜ್ಜಿತ ಸಂಚಾರಕ್ಕೆ ವ್ಯವಸ್ಥೆ ಹಾಗೂ ಕಲ್ಸಂಕ ಜಂಕ್ಷನ್ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಸಕ ಕೆ.ರಘುಪತಿ ಭಟ್ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಕಲ್ಸಂಕ ಸರ್ಕಲ್ ಪರಿಶೀಲನೆ: ಕಲ್ಸಂಕ ಜಂಕ್ಷನ್‌ನಲ್ಲಿ ಫ್ರೀ ಲೆಫ್ಟ್ ನಿರ್ಮಿಸಲು ಮಾಂಡವಿ ಬಿಲ್ಡರ್ಸ್ ಸಹಕಾರ ದೊಂದಿಗೆ ಶೀಘ್ರವೇ ಕಾಮಗಾರಿ ಆರಂಭಿಸುವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಪೋಲಿಸ್ ವರಿಷ್ಠಾಧಿಕಾರಿ ಹಾಕಿ ಅಕ್ಷಯ್ ಮಚ್ಚಂದ್ರ, ನಗರಸಭೆಯ ಪೌರಾಯುಕ್ತ ಉದಯ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಯಶ್ವಂತ್ ಪ್ರಭು ಹಾಗೂ ಉದ್ಯಮಿ ಜೆಗ್ರಿ ಡಯಾಸ್ ಉಪಸ್ಥಿತರಿದ್ದರು.
Kshetra Samachara
27/09/2022 12:26 pm