ಬೈಂದೂರು: ಇತ್ತೀಚಿಗೆ ಕೊಲ್ಲೂರಿನಲ್ಲಿ ಭೇಟಿಯಾದ ವಸತಿ ಸಚಿವರಾದ ವಿ ಸೋಮಣ್ಣ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಈವರೆಗೆ 1466 ಮನೆಗಳನ್ನು ನೀಡಿದ್ದು, ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಗಿದೆ. ಇನ್ನೂ ಹೆಚ್ಚುವರಿಯಾಗಿ ಅನೇಕರು ವಸತಿ ಯೋಜನೆಗೆ ಕಾಯುತ್ತಿದ್ದು, ಕೊರೋನಾ ಮತ್ತಿತರ ಕಾರಣಗಳಿಂದ ಮನೆ ನಿರ್ಮಿಸಲು ಕಷ್ಟಪಡುತ್ತಿರುವ ಬಗ್ಗೆ ಮಂತ್ರಿಗಳ ಗಮನ ಸೆಳೆಯಲಾಯಿತು. ಈ ಬಗ್ಗೆ ಪೂರಕವಾಗಿ ಸ್ಪಂದಿಸಿದ ಸಚಿವರು ತಕ್ಷಣ 2000 ಮನೆಯನ್ನು ಬೈಂದೂರು ಕ್ಷೇತ್ರಕ್ಕೆ ಮಂಜೂರು ಮಾಡಿಸಲು ಆದೇಶಿಸಿದರು.
ಸದರಿ ಪ್ರತಿಯನ್ನು ವಸ್ಥಾಪಕ ನಿರ್ದೇಶಕರು ರಾಜೀವ ಗಾಂಧಿ ವಸತಿ ನಿಗಮ ಇವರನ್ನು ಭೇಟಿಯಾಗಿ ಕ್ಷೇತ್ರದ 2000 ಜನರ ಮನೆ ನಿರ್ಮಾಣಕ್ಕೆ ಸರ್ಕಾರದ ವತಿಯಿಂದ ಕ್ರಮವಹಿಸುವಂತೆ ವಿನಂತಿಸಲಾಗಿದೆ. ಈ ಸಂಬಂಧ ಇಂದು ಬೈಂದೂರು ಮತ್ತು ಕುಂದಾಪುರ ತಾಲೂಕು ಕಾರ್ಯನಿರ್ವಹಾಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಶೀಘ್ರ ಫಲಾನುಭವಿಗಳ ಆಯ್ಕೆ ಮಾಡುವಂತೆ ನಿರ್ದೇಶಿಸಲಾಗಿದೆ. ನನ್ನ ಮನವಿ ಪುರಸ್ಕರಿಸಿ, ಕ್ಷೇತ್ರದ ಜನರಿಗೆ ಸಹಾಯ ಮಾಡಲು ಅನುವು ಮಾಡಿಕೊಟ್ಟ ಸೋಮಣ್ಣ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಮತ್ತೊಮ್ಮೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಬೈಂದೂರು ಶಾಸಕ.ಬಿ.ಎಮ್. ಸುಕುಮಾರ ಶೆಟ್ಟಿ ಹೇಳಿದ್ದಾರೆ.
Kshetra Samachara
01/09/2022 05:37 pm