ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಡವರ ಮನೆಗೆ ಬೆಳಕು ತಂದ ಪುಟಾಣಿ ಸಮನ್ವಿ ಚೇತನ್ ಹುಟ್ಟುಹಬ್ಬ

ಉಡುಪಿ: ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಉಡುಪಿ ವತಿಯಿಂದ ಮೂಡುಸಗ್ರಿ ವಾರ್ಡಿನ ಆಶಾ ಸುಭಾಷ್ ನಾಯ್ಕ ನೊಳೆಮಜಲು ಅವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು.

ಈ ಮನೆಗೆ ಕಳೆದ 16 ವರ್ಷಗಳಿಂದ ವಿದ್ಯುತ್ ಸಂಪರ್ಕ ಇರಲಿಲ್ಲ!. ಈ ಸೇವಾ ಕೈಂಕರ್ಯದ ಉದ್ಘಾಟನೆಯನ್ನು ಇಂದು ತನ್ನ ದ್ವಿತೀಯ ವರ್ಷದ ಹುಟ್ಟುಹಬ್ಬ ಆಚರಣೆ ಮಾಡುತ್ತಿರುವ ಉಡುಪಿ ಕನ್ನರ್ಪಾಡಿ ನಿವಾಸಿ ಚೇತನ್ ಕುಮಾರ್ ಅವರ ಮಗಳಾದ ಸಮನ್ವಿ ಚೇತನ್ ಮಾಡಿದರು.

ಈ ಸಂದರ್ಭ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮಾತನಾಡಿ, ಚೇತನ್ ಕುಮಾರ್ ದಂಪತಿ ತಮ್ಮ ಮಗುವಿನ ಹುಟ್ಟುಹಬ್ಬದ ಆಚರಣೆ ಸಲುವಾಗಿ ಈ ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿ, ಸಮಾಜಕ್ಕೆ ಮಾದರಿ- ಆದರ್ಶಮಯ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

2022ರ ಒಳಗೆ ಉಡುಪಿ ನಗರ ಶೇ.100 ಮನೆಗೆ ವಿದ್ಯುತ್ ಸಂಪರ್ಕ ಹೊಂದಿದ ರಾಷ್ಟ್ರದ ಮೊದಲ ನಗರವಾಗಿ ಮಾಡಲಾಗುವುದು ಎಂದರು.

Edited By : Nagaraj Tulugeri
Kshetra Samachara

Kshetra Samachara

12/02/2021 01:22 pm

Cinque Terre

6.17 K

Cinque Terre

0

ಸಂಬಂಧಿತ ಸುದ್ದಿ