ಹೆಬ್ರಿ: ಇಂದು ಸಾಹಿತ್ಯ ಉಳಿದಿದೆ ಎಂದಾದರೆ ಅದಕ್ಕೆ ಹಳ್ಳಿಯ ಜನರ ಪ್ರಾಮಾಣಿಕ ಪ್ರಯತ್ನವೇ ಕಾರಣ. ಈ ಹಳ್ಳಿಯಲ್ಲಿ ನಡೆದ ಅದಿಗ್ರಾಮೋತ್ಸವ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಕರ್ನಾಟಕ ಪ್ರವಚನ ರತ್ನ ಮುನಿರಾಜ ರೆಂಜಾಳ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವರು ಸಿರಿಬೈಲಿನಲ್ಲಿ ಭಾನುವಾರ ನಡೆದ ಆದಿಗ್ರಾಮೋತ್ಸವ - ಗ್ರಾಮ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಆಶಯ ಭಾಷಣ ಮಾಡಿದರು. ನಮ್ಮೂರು ನನ್ನ ಕನಸು ಪತ್ರಕರ್ತರಿಗಾಗಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಧನಂಜಯ ಮೂಡುಬಿದ್ರಿ ಮಾತನಾಡಿದರು. ಆರ್.ಬಿ. ಜಗದೀಶ್, ಬಾಲಕೃಷ್ಣ ಭೀಮನಗುಳಿ, ಹೆಬ್ರಿಯ ನರೇಂದ್ರ ಎಸ್. ಬಾಳೆಹೊನ್ನೂರು,ಗಣೇಶ್ ಕಾಮತ್, ಜಗದೀಶ ಅಂಡಾರು,ರಾಮ್ ಅಜೆಕಾರ್, ಪದ್ಮಶ್ರೀ ನಿಡೋಡ್ಡಿ ಭಾಗವಹಿಸಿದ್ದರು.
ಕವಿಗೋಷ್ಠಿ ಸಹಿತ ವಿವಿಧ ಕಾರ್ಯಕ್ರಮಗಳು ನಡೆಯಿತು. ಧಾರ್ಮಿಕ ಕೇಂದ್ರಗಳ ನಿರ್ಮಾಣ ಶಿಲ್ಪಿ ಮಹಮ್ಮದ್ ಗೌಸ್ ಅವರಿಗೆ ಅದಿಗ್ರಾಮೋತ್ಸವ ಗೌರವ- 2021, ದಕ್ಷಿಣ ಕನ್ನಡ ಜಿಲ್ಲಾ ಕಣ್ಣಿನ ವೈದ್ಯರ ಸಂಘಟನೆಯ ಅಧ್ಯಕ್ಷ ಡಾ. ಸುಧೀರ್ ಹೆಗ್ಡೆ ಅವರಿಗೆ ಗ್ರಾಮ ಗೌರವ ಪ್ರದಾನ ಮಾಡಲಾಯಿತು.
ಹೆಬ್ರಿಯ ಶಾಂತಿನಿಕೇತನ ಸೌಹಾರ್ದ ಸಹಕಾರ ಸಂಘ, ಅಜೆಕಾರು ಶ್ರೀ ಮಹಮ್ಮಾಯಿ ಮಹಿಳಾ ಭಜನಾ ಮಂಡಳಿ, ಶ್ರೀ ರಾಮ ಮಂದಿರ, ದೊಂಡೇರಂಗಡಿ ಮತ್ತು ಸಿರಿಬೈಲು ದುರ್ಗಾಪರಮೇಶ್ವರಿ ಭಜನಾ ಮಂಡಳಿಗೆ ಗ್ರಾಮೋತ್ಸವ ಸಂಘ ಸಿರಿ ಗೌರವ ಹಾಗೂ
ಶ್ಯಾಮ್ ಪ್ರಸಾದ್ ಹೆಗ್ಡೆ ನಲ್ಲೂರು, ಡಾ.ಕಬ್ಬಿನಾಲೆ ಸುದರ್ಶನ್ ಹೆಬ್ಬಾರ್ ಮುನಿಯಾಲು, ಕೃಷ್ಣಪ್ಪ ಸೊಪ್ಪಿನ್ ಲಿಂಗನಾಯಕಹಳ್ಳಿ, ಉಪೇಂದ್ರ ನಾಯಕ್ ಶಿವಪುರ, ರಶ್ಮಿ ಸತೀಶ್ ಆಚಾರ್ಯ, ಅಣ್ಣಪ್ಪ ಪೂಜಾರಿ ದೆಂದೂರು ಕಟ್ಟೆ, ವಂದನಾ ರೈ ನಲ್ಲೂರು ಮುನಿಯಾಲು, ಪ್ರಮೋದ ಶೆಟ್ಟಿಗಾರ್ ಮುದ್ರಾಡಿ, ರೇಷ್ಮಾ ಶೆಟ್ಟಿ ಗೊರೂರು, ಗಣೇಶ್ ಕಾಮತ್ ಮೂಡುಬಿದಿರಿ, ಎಳ್ಳಾರೆ ರೇಷ್ಮಾ ಆಚಾರ್ಯ, ದೀಪಕ್ ದುರ್ಗಾ ಹೆಬ್ರಿ, ಜಾನ್ ಟೆಲ್ಲಿಸ್ ಅಜೆಕಾರ್, ಕೃಷ್ಣಮೂರ್ತಿ ಕಾಡುಹೊಳೆ ಅಜೆಕಾರ್,ಅಬ್ದುಲ್ ಗಪೂರ್, ಜ್ಯೋತಿ ಪದ್ಮಾನಾಭ ಭಂಡಿ ಕುಕ್ಕುಂದೂರು, ಅಚ್ಯುತ್ ಮಾರ್ನಾಡ್ ಮೂಡುಬಿದಿರೆ, ಪ್ರವೀಣ ಹೆಗ್ಡೆ ಕಡ್ತಲ, ಪ್ರಣಮ್ಯ ಅಗಲಿ ಪುತ್ತೂರು,
ಶೀಲಾ ಪಡೀಲ್ ಮಂಗಳೂರು, ವಸಂತಿ ಕಾರ್ಕಳ, ಪುನೀತ್ ಮೂಡುಬಿದಿರೆ, ಕೆ.ಎಂ.ಖಲೀಲ್, ಸುರೇಂದ್ರ ಮೋಹನ್ ಮುದ್ರಾಡಿ,
ಶಬರೀಶ್ ಆಚಾರ್ಯ ಮುನಿಯಾಲು, ಅನಿಲ್ ಜ್ಯೋತಿನಗರ ಅವರಿಗೆ ಆದಿಗ್ರಾಮೋತ್ಸವ ಯುವಸಿರಿ ಗೌರವ ಪ್ರದಾನ ಮಾಡಲಾಯಿತು.
ಸಾಹಿತ್ಯ ಸಮ್ಮೇಳನ ಸಂಘಟಕ, ಸಾಹಿತಿ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಆದಿ ಗ್ರಾಮೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಸಂತೋಷ್ ಕುಮಾರ್ ಶೆಟ್ಟಿ, ಅರುಣ್ ಭಟ್ ಎಣ್ಣೆಹೊಳೆ, ಭಜನಾ ಮಂಡಳಿ ಅಧ್ಯಕ್ಷ ಶೇಖರ ಕಡ್ತಲ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮುನಿಯಾಲು ಗೋಪಿನಾಥ್ ಭಟ್, ಪ್ರೇಮಾ ವ. ಸೂರಿಗ, ಮಂಜುನಾಥ್, ಆರ್. ಬಿ.ಜಗದೀಶ್, ಸಂಪತ್ ಕುಮಾರ್ ಜೈನ್, ರಮೇಶ ಸುವರ್ಣ ಮತ್ತು ರಾಘವ ದೇವಾಡಿಗ ಉಪಸ್ಥಿತರಿದ್ದರು.
Kshetra Samachara
27/01/2021 10:55 am