ಉಡುಪಿ: ಉಡುಪಿಯಲ್ಲಿ ಇನ್ಮುಂದೆ ದಿನಸಿ ಸೇರಿದಂತೆ ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ಬರಲಿವೆ. ನಾಮ್ ವೇ ಎಂಬ ಡೆಲಿವರಿ ಆ್ಯಪ್ ಈ ಸೇವೆಯನ್ನು ನೀಡಲಿದ್ದು ಆ್ಯಪ್‌ನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಲೋಕಾರ್ಪಣೆಗೊಳಿಸಿದ್ದಾರೆ.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಾಮ್ ವೇ ಆ್ಯಪ್ ಲಾಂಚ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ್ಯಪ್ ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು ಎಲ್ಲರೂ ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ವೆಬ್‌ಸೈಟ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಪ್ರಖ್ಯಾತ ನಟ ಬೋಜರಾಜ್ ವಾಮಂಜೂರು, ರಾಘವೇಂದ್ರ ಕಿಣಿ, ಉಡುಪಿ ನಗರ ಠಾಣೆಯ ಪೊಲೀಸ್ ಸಬ್ ಇನ್ಸೆಪೆಕ್ಟರ್ ಶಕ್ತಿವೇಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಾವ್ ವೇ ಅಗತ್ಯ ವಸ್ತುಗಳ ಡೆಲಿವರಿ ಆ್ಯಪ್‌ನ ಸಿ.ಇ.ಓ ಶ್ರೀಶ ವಿ.ಎಸ್ ಆ್ಯಪ್‌ನ ಸೇವೆಗಳ ಬಗ್ಗೆ ತಿಳಿಸಿದರು.
ಉಡುಪಿ ನಗರದ 10 ಕಿ.ಮೀ ವ್ಯಾಪ್ತಿಯಲ್ಲಿ ಈ ಆ್ಯಪ್‌ನ ಸೇವೆ ಜನರಿಗೆ ಲಭ್ಯವಾಗಲಿದ್ದು, ಮೊಬೈಲ್ ಮೂಲಕ ಪ್ಲೇ ಸ್ಟೋರ್‌ನಿಂದ ನಾಮ್ ವೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದಾಗಿದೆ. ಔಷಧಿ ವಸ್ತುಗಳು, ಫುಡ್ ಐಟಂ, ದಿನಸಿ ಸೇರಿದಂತೆ ಇತರೇ ಅಗತ್ಯ ವಸ್ತುಗಳನ್ನು ಆರ್ಡರ್ ಮಾಡಿ ಮನೆ ಬಾಗಿಲಿಗೆ ಈ ಆ್ಯಪ್ ಮೂಲಕ ತರಿಸಿಕೊಳ್ಳಬಹುದು.
Kshetra Samachara
20/01/2021 09:58 pm