ಉಡುಪಿ: ನಗರಕ್ಕೆ ನೀರು ಪೂರೈಕೆಯಾಗುವ ಬಜೆ ಡ್ಯಾಂನಲ್ಲಿ ಸೋರಿಕೆ ಶುರುವಾಗಿದ್ದು, ಬೇಸಗೆಯಲ್ಲಿ ನಗರದ ನಿವಾಸಿಗಳಿಗೆ ನೀರಿನ ಬರ ಕಾಡುವುದೇ ಎನ್ನುವ ಆತಂಕ ಕಾಡುತ್ತಿದೆ.
ಬಜೆಯಲ್ಲಿ ಎರಡು ಅಣೆಕಟ್ಟುಗಳಿದ್ದರೂ ಒಂದರಲ್ಲಿ ಮಿನಿ ವಿದ್ಯುತ್ ಸ್ಥಾವರಕ್ಕಾಗಿ ಬಳಕೆಯಾಗುತ್ತಿದೆ. ಇತ್ತ ಸ್ವರ್ಣಾದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಈಗಾಗಲೇ ನಗರಸಭೆ ಶಿರೂರಿನಲ್ಲಿ ಸ್ಯಾಂಡ್ ಬ್ಯಾಗ್ ಹಾಕಿ ನೀರನ್ನು ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ. ಇಲ್ಲಿನ ಹೆಚ್ಚುವರಿ ನೀರನ್ನು ಬಜೆ ಡ್ಯಾಂಗೆ ಬಿಡಲಾಗುತ್ತಿದೆ. ಆದರೆ ಇಲ್ಲಿನ ಗೇಟ್‌ಗಳಲ್ಲಿ ಸೋರಿಕೆ ಕಂಡು ಬಂದಿದೆ. ಹೀಗಾಗಿ ನೀರಿನ ಅಭಾವದ ಸಾಧ್ಯತೆ ಹೆಚ್ಚಾಗಿದೆ.
Kshetra Samachara
28/12/2020 02:55 pm