ಉಚ್ಚಿಲ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಚ್ಚಿಲ ವಲಯದ ವತಿಯಿಂದ ಪೊಲ್ಯ ಒಳ ರಸ್ತೆಗೆ ಜಲ್ಲಿಹುಡಿ ಹಾಕಿ ಸಮತಟ್ಟು ಮಾಡುವ ಮೂಲಕ ಶ್ರಮದಾನ ನಡೆಸಲಾಯಿತು.
ಪೊಲ್ಯ ನವಾಝ್ ಸೂಪಿ ಇವರ ಮನೆಯ ಪಕ್ಕದ ಸಾರ್ವಜನಿಕ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ವಾಹನ ಸಂಚಾರಕ್ಕೆ ತೊಡಕು ಉಂಟಾಗಿದ್ದು,ಎಸ್ಡಿಪಿಐ ನಾಯಕ ಮಜೀದ್ ಪೊಲ್ಯ ಇವರ ನೇತ್ರತ್ವದಲ್ಲಿ ರಸ್ತೆಗೆ ಜಲ್ಲಿ ಹುಡಿ ಹಾಕಿ ಸಮತಟ್ಟು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಇತ್ತೀಚಿಗೆ ಗಾಳಿ ಮಳೆಗೆ ಕುಸಿದ ಬಿದ್ದ ಮುಳ್ಳಗುಡ್ಡೆಯ ಮನೆಯೊಂದರ ತಾತ್ಕಾಲಿಕ ದುರಸ್ತಿಗೆ ಬೇಕಾದ ಸಾಮಾಗ್ರಿಗಳನ್ನು ಹೊತ್ತು ಸಾಗಿಸುವ ಮೂಲಕ ಈ ತಂಡ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ಎಸ್ಡಿಪಿಐ ನಾಯಕರಾದ ಇಬ್ರಾಹಿಂ ಪಲಿಮಾರ್,ನವಾಝ್,ಮಯ್ಯದ್ದಿ ಪೊಲ್ಯ,
ಇಮ್ರಾನ್ ಸೂಪಿ,ಹಸನ್ ಪಡು ಮೊದಲಾದವರು ಉಪಸ್ಥಿತರಿದ್ದರು.
Kshetra Samachara
07/10/2020 06:20 pm