ಉಡುಪಿ: ಯಾವುದೇ ಗ್ರಾಮ ಪಂಚಾಯತ್‌ನೊಂದಿಗೆ ನಾಗರಿಕರು ಹಾಗೂ ಬೇರೆ ಬೇರೆ ಉದ್ದೇಶಗಳಿಗಾಗಿ ಸಮುದಾಯದ ಜನರು ಸ್ಥಾಪಿಸಿದ ಸಂಸ್ಥೆಗಳು ತಮ್ಮದೇ ರೀತಿಯಲ್ಲಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಉಪನ್ಯಾಸಕಿ, ಸಹಾಯಕ ಶಿಬಿರಾಧಿಕಾರಿ ಪ್ರಮೀಳಾ ವಾಝ್ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಉಡುಪಿ ತೆಂಕನಿಡಿಯೂರು ಇಲ್ಲಿನ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿಗಳಿಗಾಗಿ ನಡೆದ ಸಮಾಜಕಾರ್ಯ ಶಿಬಿರದ ಅಂಗವಾಗಿ ಸಮುದಾಯ ಕೇಂದ್ರಿತ ಸಂಸ್ಥೆಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳು ಗ್ರಾಮದ ಅಭಿವೃದ್ಧಿಗೆ ಹೇಗೆ ತಮ್ಮ ಪ್ರಭಾವ ಬೀರುತ್ತವೆ ಮತ್ತು ಸಂಘಟನೆಗಳಲ್ಲಿನ ಅನುಭವಗಳನ್ನು ಶಿಬಿರಾರ್ಥಿಗಳು ಅರ್ಥ ಮಾಡಿಕೊಳ್ಳುವುದಕ್ಕಾಗಿ ಈ ಸಂವಾದವನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರು, ಶ್ರೀ ಗುರು ಯುವಕ ಮಂಡಲದ ಅಧ್ಯಕ್ಷ ಅಜೀಜ್, ಕಲಾ ದೇಗುಲ ಕೆಳನೇಜಾರಿನ ಅಧ್ಯಕ್ಷ ಉದಯ ಕುಮಾರ್, ಬಾಲ ಮಾರುತಿ ವ್ಯಾಯಾಮ ಶಾಲೆ ಕಲ್ಯಾಣಪುರದ ಅಧ್ಯಕ್ಷ ಗಣೇಶ್ ಶೇರಿಗಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸದ ಸಂಯೋಜಕಿ ಶಕುಂತಳ ಹಾಗೂ ಸ್ವಸಹಾಯ ಸಂಘಗಳ ಪದಾಧಿಕಾರಿ ಮರಿಯ ಡಿಸೋಜ ತಮ್ಮ ಸಂಸ್ಥೆಗಳ ಇತಿಹಾಸ, ಬೆಳವಣಿಗೆ ಮತ್ತು ಕಲ್ಯಾಣಪುರದ ಗ್ರಾಮಾಭಿವೃದ್ಧಿಗೆ ಈ ಸಂಸ್ಥೆಗಳ ಕೊಡುಗೆಗಳ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಬಿರಾಧಿಕಾರಿ ಸುಷ್ಮಾಟಿ., ಉಪನ್ಯಾಸಕ ರಾಜೇಂದ್ರ ಎಂ, ಶ್ರೀಕಲಾ ಕುಮಾರಿ ಉಪಸ್ಥಿತರಿದ್ದರು.
ಶಿಬಿರಾರ್ಥಿ ಸ್ಪಂದನ ಸ್ವಾಗತಿಸಿ, ಸಜನಿ ಕೊಡುಗೆಗಳ ಬಗ್ಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಶಿಬಿರಾಧಿಕಾರಿ ಶ್ರೀಮತಿ ಸುಷ್ಮಾಟಿ., ಉಪನ್ಯಾಸಕ ರಾಜೇಂದ್ರ ಎಂ, ಶ್ರೀಮತಿ ಶ್ರೀಕಲಾ ಕುಮಾರಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಸ್ಪಂದನ ಸ್ವಾಗತಿಸಿ, ಸಜನಿ ವಂದಿಸಿದರು.ದೀಪಕ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
27/09/2022 09:12 pm