ಈಕೆ 80 ವರ್ಷದ ವೃದ್ಧೆ. ತನಗೊಂದು ಸ್ವಂತದ ಸೂರು ಬೇಕು ಎಂದು ಪರಿತಪಿಸುತ್ತಿದ್ದಾಕೆ. ಆದರೆ ಈ ಇಳಿ ವಯಸ್ಸಿನಲ್ಲಿ ತನಗೆ ಒಂದು ಸೂರು ಸಿಕ್ಕೀತು ಎಂದು ಈ ಅಜ್ಜಿ ಕನಸಲ್ಲೂ ಎಣಿಸಿರಲಿಕ್ಕಿಲ್ಲ. ಆದರೆ ಈಕೆಯ ಕನಸು ನನಸು ಮಾಡಿದ್ದು ,ದಾನಿ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ.
ಹೌದು..ಬೈಂದೂರಿನ ಲಕ್ಷ್ಮೀ ದೇವಾಡಿಗ ಕುಟುಂಬಕ್ಕೆ ಸುಸಜ್ಜಿತ ಸೂರು ನಿರ್ಮಿಸಿಕೊಟ್ಟಿದ್ದಾರೆ ಡಾ. ಗೋವಿಂದ ಬಾಬು ಪೂಜಾರಿ. ಈ ಸಂಬಂಧ ನಡೆದ ಕಾರ್ಯಕ್ರಮವು ಅಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಯಿತು.
ಲಕ್ಷ್ಮೀ ದೇವಾಡಿಗ ಅವರಿಗಾಗಿ ನಿರ್ಮಿಸಲಾದ "ವರಲಕ್ಷ್ಮೀ ನಿಲಯ' ಪ್ರವೇಶೋತ್ಸವಕ್ಕೆ ಕಲ್ಲಡ್ಕ ಪ್ರಭಾಕರ ಭಟ್ ಆಗಮಿಸಿ ಶುಭಕೋರಿದರು. ಇದು ಡಾ. ಗೋವಿಂದ ಬಾಬು ಪೂಜಾರಿಯವರು ಅಶಕ್ತರು, ಬಡವರಿಗಾಗಿ ಕಟ್ಟಿಸಿಕೊಡುತ್ತಿರುವ ಏಳನೇ ಮನೆ. ಮನೆಯ ಗೃಹಪ್ರವೇಶದಲ್ಲಿ ಈ ವಯೋವೃದ್ಧೆಯ ಕಣ್ಣಲ್ಲಿ ಆನಂದಬಾಷ್ಪ ಇತ್ತು. ನೆರೆದ ಜನರು ಅಜ್ಜಿಗೆ ಶುಭ ಹಾರೈಸಿ,ಸಂಭ್ರಮಿಸಿದರು.
PublicNext
29/03/2022 01:22 pm