ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಹಕಾರವಾಗಬೇಕಿದ್ದ ಹಂಪ್ಸ್ ಗಳಿಂದ ಸಂಚಕಾರ : ಕಾರ್ಕಳ- ಪಡುಬಿದ್ರಿ ಹೈ ವೇ ಪ್ರಯಾಣ ದುಸ್ಥರ!

ಕಾರ್ಕಳ: ರಸ್ತೆ ಮಧ್ಯೆ ಹಂಪ್ ಗಳನ್ನು ಹಾಕುವ ಉದ್ದೇಶ ಯಾವುದೇ ಅಪಘಾತ ಸಂಭವಿಸದಿರಲಿ ಎಂದು ಆದ್ರೆ ಈ ಹೈ ವೇ ನಲ್ಲಿ ಈ ಹಂಪ್ ಗಳೇ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

ಹೌದು ಕಾರ್ಕಳ- ಪಡುಬಿದ್ರಿ ಹೆದ್ದಾರಿಯಲ್ಲಿ ಹೆಜ್ಜೆ ಹೆಜ್ಜೆಗೂ ಇರುವ ಹಂಪ್ ಗಳಿಂದಾಗಿ ಸಂಚಾರದ ವೇಳೆ ವಾಹನ ಸವಾರರ ಕಷ್ಟ ದೇವರಿಗೆ ಗೊತ್ತು.

ಇನ್ನೂ ಹಲವು ಅಪಘಾತಗಳಿಗೂ ಈ ಹಂಪ್ ಗಳೇ ಕಾರಣವಾಗಿವೆ ಎಂಬುದು ಸವಾರರ ಸಾರ್ವತ್ರಿಕ ಅಭಿಪ್ರಾಯವಾಗಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿರುವ ಇಲ್ಲಿ ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತವೆ.

ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಂಪ್ ಗಳಿಂದಾಗಿ ವಾಹನ ಸವಾರರ ಪಾಲಿಗೆ ಅಪಘಾತ ವಲಯಗಳಾಗಿ ಪರಿವರ್ತಿಸಿವೆ.

ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿರ್ಮಾಣದ ಬಳಿಕ ಅಪಘಾತಗಳ ಪ್ರಮಾಣವೂ ಹೆಚ್ಚಾಗತೊಡಗಿದೆ.

ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ 29 ಕಿ.ಮೀ. ಅಂತರದಲ್ಲಿ 38 ಹಂಪ್ಸ್ ಹಾಗೂ ಸ್ಪೀಡ್ ಬ್ರೇಕರ್ ಗಳನ್ನು ನಿರ್ಮಾಣ ಮಾಡಲಾಗಿದೆ.

ಅವೆಲ್ಲವೂ ಈಗ ಬಣ್ಣ ಕಳೆದುಕೊಂಡು ಸವಾರರ ಗೋಚರಕ್ಕೆ ಬಾರದ ಸ್ಥಿತಿಗೆ ತಲುಪಿವೆ.

ಬಹುಮುಖ್ಯವಾಗಿ ನಿಟ್ಟೆ, ಹಾಳೆಕಟ್ಟೆ, ಬೆಳ್ಮಣ್, ಕೆದಿಂಜೆ, ನಂದಳಿಕೆ ಲಕ್ಷ್ಮೀ ಜನಾರ್ದನ ಶಾಲೆ, ಅಡ್ವೆ, ನಂದಿಕೂರು, ಕಾಂಜರಕಟ್ಟೆ, ಅಂಚೆಕಚೇರಿ, ಚರ್ಚ್ ಬಳಿಯ ಹಂಪ್ಸ್ ಗಳು ಹೆಚ್ಚು ಅಪಾಯಕಾರಿ ಸ್ಥಳಗಳಾಗಿವೆ.

Edited By : Nirmala Aralikatti
Kshetra Samachara

Kshetra Samachara

06/10/2020 12:46 pm

Cinque Terre

14.49 K

Cinque Terre

4

ಸಂಬಂಧಿತ ಸುದ್ದಿ