ಕಾರ್ಕಳ : ಕಾರ್ಕಳ ಪುರಸಭೆಯ ಒಂಬತ್ತು ವಾಹನ ಗಳಿಗ ಪೈಕಿ ವಾಹನ ಫಿಟ್ನೆಸ್ ಪ್ರಮಾಣಪತ್ರ ಹಾಗೂ ವಿಮೆ ಇಲ್ಲದೇ ಸಂಚಾರಿಸುತ್ತಿದ್ದ ಎರಡು ವಾಹನಗಳನ್ನು ಆರ್ ಟಿ ಓ ಅಧಿಕಾರಿಗಳು ಪ್ರವಾಸಿ ಬಂಗಲೆ ಬಳಿ ಜಫ್ತಿ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ಹೆಸರಿನಲ್ಲಿರುವ ಒಟ್ಟು ಒಂಬತ್ತು ಸರ್ಕಾರಿ ವಾಹನಗಳಿಗೆ ವಿಮೆ ವಾಹನ ಫಿಟ್ನೆ ಸ್ ಪ್ರಮಾಣಪತ್ರ ,ಹಾಗೂ ಹೊಗೆ ತಪಾಸಣೆ ಇಲ್ಲದೆ ಐದು ವರ್ಷಗಳೇ ಕಳೆದರೂ ಈವರೆಗೆ ಸಂಬಂಧಿಸಿದ ಅಧಿಕಾರಿಗಳಾಗಲಿ, ಮುಖ್ಯಾಧಿಕಾರಿಗಳು ದಾಖಲೆಗಳನ್ನು ಸರಿಪಡಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ.
ಎಂದು ಪುರಸಭೆ ಸದಸ್ಯ ಸೋಮನಾಥನಾಯ್ಕ್ ಉಡುಪಿ ಪ್ರಾದೇಶಿಕ ಸಾರಿಕೆ ಕಚೇರಿಗೆ ಲಿಖಿತವಾಗಿ ದೂರು ನೀಡಿದ್ದರು.
ಈ ದೂರಿ ಅನ್ವಯ ಇಂದು ಆರ್ ಟಿ ಓ ಅಧಿಕಾರಿಗಳ ಕಾರ್ಯಚರಣೆ ನಡೆಸಿ ವಾಹನವನ್ನು ಜಫ್ತಿ ಮಾಡಿ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.
ದಾಖಲೆಗಳನ್ನು ಸರಿಪಡಿಸದೇ ವಾಹನವನ್ನು ರಸ್ತೆಗಿಳಿಸಿದ್ದಲ್ಲಿ ಚಾಲನಾ ಪರವಾನಿಗೆ ರದ್ದು ಮಾಡುವುದಾಗಿ ಅರ್ ಟಿ ಓ ಅಧಿಕಾರಿ ವಿಶ್ವನಾಥ ಎಚ್ಚರಿಕೆ ನೀಡಿದ್ದಾರೆ.
ಮೋಟಾರ್ ಕಾಯ್ದೆ 1989 ರ ಪ್ರಕಾರ, ವಾಹನವು ಅದರ ಹೆಸರಿಗೆ ಮಾನ್ಯ ವಾಹನ ಫಿಟ್ ನೆಸ್ ಪ್ರಮಾಣಪತ್ರವನ್ನು ಹೊಂದಿದ್ದರೆ ಮಾತ್ರ ವಾಹನದ ನೋಂದಣಿಯನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ.
ವಾಹನಗಳಿಗೆ ಫಿಟ್ ನೆಸ್ ನ ಪ್ರಮಾಣಪತ್ರವು ಸರ್ಕಾರವು ಹೊರಡಿಸಿದ ದಾಖಲೆಯಾಗಿದ್ದು, ವಾಹನದ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ವಾಹನಗಳನ್ನು ರಸ್ತೆಗಳಲ್ಲಿ ಓಡಿಸಲು ಯೋಗ್ಯವಾಗಿದೆ ಎಂದು ಹೇಳುತ್ತದೆ.
ಕಾನೂನಿನ ಪ್ರಕಾರ, ವಾಣಿಜ್ಯ ವಾಹನಗಳಿಗೆ ಮತ್ತು ಖಾಸಗಿ ವಾಹನಗಳಿಗೆ ಫಿಟ್ ನೆಸ್ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.
Kshetra Samachara
17/12/2020 04:18 pm