ಕಾರ್ಕಳ: ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಹಾಗೂ ವಿಜೇತ ವಿಶೇಷ ಶಾಲೆ ಸಂಯುಕ್ತಾಶ್ರಯದಲ್ಲಿ "ವಿಶೇಷ ಚೇತನರ ದಿನಾಚಾರಣೆ" ಅಂಗವಾಗಿ ವಿಶೇಷ ಚೇತನರ ಸಬಲೀಕರಣದ ಕುರಿತು ಮಾಹಿತಿ ಕಾರ್ಯಕ್ರಮ ವಿಜೇತ ವಿಶೇಷ ಶಾಲೆಯಲ್ಲಿ ನಡೆಯಿತು.
ಪ್ರಧಾನ ಸಿವಿಲ್ ನ್ಯಾಯಾಧೀಶ ಪುಟ್ಟರಾಜು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ವಿಜೇತ ವಿಶೇಷ ಶಾಲೆಯ ಸಂಸ್ಥಾಪಕರಾದ ಡಾ.ಕಾಂತಿ ಹರೀಶ್ ಅಧ್ಯಕ್ಷತೆ ವಹಿಸಿದ್ದರು.
ವಿಜೇತ ವಿಶೇಷ ಶಾಲೆಯ ಮಕ್ಕಳು, ಪೋಷಕರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯವರು ಪಾಲ್ಗೊಂಡಿದ್ದರು.
Kshetra Samachara
15/12/2020 05:16 pm