ಉಡುಪಿ: ಪಾರ್ಟಿ, ಮೋಜು ಮಸ್ತಿ ಹೆಸರಿನಲ್ಲಿ ಅನೇಕರು ಪರಿಸರ ಕಾಳಜಿಯನ್ನೇ ಮರೆಯುತ್ತಿದ್ದಾರೆ. ಹೀಗೆ ಕೆಮ್ಮಣ್ಣು ಸಮೀಪದ ಹೂಡೆ ಬೀಚ್‌ನಲ್ಲಿ ರಾಶಿ ರಾಶಿ ಮದ್ಯದ ಬಾಟಲ್‌ಗಳು ಸಿಕ್ಕಿವೆ.
ಸ್ವರ್ಣಾರಾಧನಾ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನೂರಾರು ಕಾರ್ಯಕರ್ತರು ಹೂಡೆ ಬೀಚ್‌ನಲ್ಲಿ ಸ್ವಚ್ಛತೆ ಕಾರ್ಯ ಕೈಗೆತ್ತಿಕೊಂಡಿದ್ದರು. ಕೇವಲ ಎರಡೂವರೆ ಗಂಟೆಗಳ ಸ್ವಚ್ಛತಾ ಕಾರ್ಯದಲ್ಲಿ ಬರೋಬ್ಬರಿ 3000ಕ್ಕೂ ಅಧಿಕ ಮದ್ಯ ಬಾಟಲಿ, ಟನ್‌ಗಟ್ಟಲೇ ಪ್ಲಾಸ್ಟಿಕ್ ತ್ಯಾಜ್ಯ ಸಿಕ್ಕಿದೆ.
ಈ ಸಂಬಂಧ ಬೇರ ವ್ಯಕ್ತಪಡಿಸಿದ ಸ್ವಚ್ಛ ಭಾರತ್ ಫ್ರೆಂಡ್ಸ್‌ನ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಹಾಗೂ ಮದ್ಯ ಬಾಟಲಿಗಳು ಸಮುದ್ರ ಕಿನಾರೆಯಲ್ಲಿ ಸಿಕ್ಕಿರುವುದು ನಿಜಕ್ಕೂ ಆತಂಕ ತಂದಿದೆ. ಇಷ್ಟೊಂದು ಪ್ರಮಾಣದ ತ್ಯಾಜ್ಯ ಸಮುದ್ರಕ್ಕೆ ಸೇರಿದರೆ ಜಲಚರ ಜೀವಿಗಳಿಗೂ ಹಾನಿಯಾಗುತ್ತದೆ. ಒಡೆದ ಮದ್ಯದ ಬಾಟಲಿ ಪ್ರವಾಸಿಗರ ಅಥವಾ ಸ್ಥಳೀಯರ ಕಾಲಿಗೆ ತಾಗಿ ಗಾಯವಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ತಿಳಿಸಿದ್ದಾರೆ.
Kshetra Samachara
09/12/2020 08:49 pm