ಉಡುಪಿ: ನಗರದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169 ಎ ಮಲ್ಪೆ ರಸ್ತೆಯ ಹೊಂಡಗಳಿಗೆ ಸದ್ಯ ತಾತ್ಕಾಲಿಕ ಮುಕ್ತಿ ಸಿಕ್ಕಿದೆ.
ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಇಂದ್ರಾಳಿಯ ರೈಲ್ವೆ ಸೇತುವೆ ಹಾಗೂ ಪರ್ಕಳ ರಸ್ತೆಯ ಸ್ಥಿತಿ ಶೋಚನೀಯವಾಗಿತ್ತು. ಕಾಮಗಾರಿ ಸ್ಥಗಿತಗೊಂಡಿದ್ದರೂ ಹೊಂಡಗಳನ್ನು ಮುಚ್ಚಿರಲಿಲ್ಲ. ಇದರಿಂದಾಗಿ ವಾಹನ ಚಾಲಕರು, ಬೈಕ್ ಸವಾರರು ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು.
ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ಇದರ ಮೇಲೆ ಪ್ರತಿಭಟನೆ ಮಾಡಿಯೇ ಬಿಟ್ಟಿದ್ದರು. ಮಣಿಪಾಲ - ತೀರ್ಥಹಳ್ಳಿ ರಸ್ತೆಯಂತೂ ಬ್ಯುಸಿ ಟ್ರಾಫಿಕ್ ಹೆದ್ದಾರಿ. ಪರ್ಕಳ ಜಂಕ್ಷನ್ ನಂತೂ ಬಾಟಲ್ ನೆಕ್ ಪ್ರದೇಶವಾಗಿಯೇ ಉಳಿದಿದೆ. ಇಲ್ಲಿ ಎರಡು ಕಡೆ ವಾಹನ ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದು ಹರಸಾಹಸ ಪಡಬೇಕು. ಹೊಸಬರಿಗೆ ಈ ರಸ್ತೆಯಲ್ಲಿ ಬರುವಾಗ ತಮ್ಮ ವಾಹನವನ್ನು ಹೇಗೆ ಬದಿಗೆ ಸರಿಸಬೇಕು ಎನ್ನುವುದೇ ಒಮ್ಮೆ ಗೊಂದಲವಾಗುತ್ತದೆ.
ಇಂದ್ರಾಳಿ ಬಳಿ ಹೋಗುವ ರಸ್ತೆಯ ಕೆಲವು ಅಪಾಯಕಾರಿ ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ ಸಿಕ್ಕಿದೆ. ಸದ್ಯಕ್ಕೆ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ. ಆದರೂ ಪೂರ್ಣವಾಗಿ ಮುಕ್ತಿ ಸಿಕ್ಕಿಲ್ಲ. ಕಾಟಚಾರಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
Kshetra Samachara
30/11/2020 04:14 pm