ಕೊಡವೂರು: ಭಾರತೀಯ ಅಂಚೆ ಇಲಾಖೆ ಮತ್ತು ಉಡುಪ ರತ್ನ ಪ್ರತಿಷ್ಠಾನದ ಸಹಯೋಗದಲ್ಲಿ ಕೊಡವೂರಿನಲ್ಲಿ ಉಡುಪಿ ಅಂಚೆ ಇಲಾಖೆಯ ಉದ್ಯೋಗಿ ಪೂರ್ಣಿಮಾ ಜನಾರ್ದನ್ ಅವರ " ಭಾಮಾ ಫಿಲಾಟೆಲಿ ಗ್ಯಾಲರಿ" ಉದ್ಘಾಟನೆಗೊಂಡಿತು.
ಅಂಚೆ ಇಲಾಖೆಯ ಇತಿಹಾಸದೊಂದಿಗೆ ನಮ್ಮ ದೇಶದ ಇತಿಹಾಸ, ಆಗುಹೋಗು, ಮಹತ್ವ ಸಾರುವ ಅಂಚೆ ಚೀಟಿ ಸಂಗ್ರಹ ಹವ್ಯಾಸ ರಾಜರುಗಳ ಹವ್ಯಾಸವೆಂದೇ ಹೆಸರಾಗಿದ್ದು, ಈ ಹವ್ಯಾಸ ಮೈಗೂಡಿಸಿ ಕೊಂಡವರೆಲ್ಲರೂ ಅಭಿನಂದನಾರ್ಹರು ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕ ನವೀನ್ ಚಂದರ್ ಅಭಿಪ್ರಾಯಪಟ್ಟರು.
ಈ ಸಂದರ್ಭ ಪ್ರಸಿದ್ಧ ಅಂಚೆಚೀಟಿ ಸಂಗ್ರಾಹಕ ಸಂದೀಪ್ ಕುಮಾರ್ ಅವರನ್ನು ಫಿಲಾಟಲಿ ದಿನದ ಪ್ರಯುಕ್ತ ಅಭಿನಂದಿಸಲಾಯಿತು.
ಅಂಚೆ ಉಪ ಅಧೀಕ್ಷಕ ಧನಂಜಯ ಆಚಾರ್, ಉಡುಪಿ ಕಾರ್ಪೊರೇಷನ್ ಬ್ಯಾಂಕ್ ಹಾಜಿ ಅಬ್ದುಲ್ಲಾ ಮೆಮೋರಿಯಲ್ ಮ್ಯೂಸಿಯಂ ಮೇಲ್ವಿಚಾರಕ ಜಯಪ್ರಕಾಶ್ ರಾವ್, ಶಂಕರನಾರಾಯಣ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ., ಬ್ರಾಹ್ಮಣ ಮಹಾಸಭಾ ಕೊಡವೂರು ವಲಯ ಅಧ್ಯಕ್ಶ ಕೆ. ನಾರಾಯಣ ಬಲ್ಲಾಳ್, ಕಟ್ಟಡ ನಿರ್ಮಾಣ ಅಭಿಯಂತರ ವಿಶ್ವನಾಥ್ ಭಟ್, ರಾಮಾಂಜಿ ಉಪಸ್ಥಿತರಿದ್ದರು.
ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ, ಪ್ರಸ್ತಾಪಿಸಿದರು. ನರಸಿಂಹ ನಾಯಕ್ ವಂದಿಸಿದರು. ಉಡುಪ ರತ್ನ ಪ್ರತಿಷ್ಠಾನ ಸಂಚಾಲಕ ಜನಾರ್ದನ್ ಕೊಡವೂರು ನಿರೂಪಿಸಿದರು. ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಪ್ರಾರ್ಥಿಸಿದರು.
Kshetra Samachara
19/10/2020 11:47 am