ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಯಕ್ಷಗಾನ ಕಲಾವಿದ ಚಿದಾನಂದ ಗೌಡ ನಿಧನ

ಉಡುಪಿ: ಕಟೀಲು ಮೇಳದಲ್ಲಿ ಸಹಾಯಕ ಮದ್ದಲೆಗಾರರಾಗಿದ್ದ ಚಿದಾನಂದ ಗೌಡ (31 ) ಅಲ್ಪಕಾಲದ ಅಸೌಖ್ಯದಿಂದ ಸುರತ್ಕಲ್‍ನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ 15 ವರ್ಷಗಳಿಂದ ಕಟೀಲು ಮೇಳದಲ್ಲಿ ನಿತ್ಯವೇಷಧಾರಿಯಾಗಿ, ಸಹಾಯಕ ಮದ್ದಲೆಗಾರರಾಗಿ ತಿರುಗಾಟ ನಡೆಸುತ್ತಿದ್ದ ಇವರು ಪಾರಂಪರಿಕ ಚೌಕಟ್ಟಿನೊಳಗೆ ಮದ್ದಲೆ ನುಡಿತಗಳಿಗೆ ಮತ್ತು ಚಂಡೆವಾದಕರಿಗೆ ಪುರಕವಾಗಿ ಒತ್ತು ಮದ್ದಲೆಯನ್ನು ನುಡಿಸುವ ಕೌಶಲ್ಯವನ್ನು ಹೊಂದಿದ್ದರು.

ಅವಿವಾಹಿತರಾಗಿದ್ದ ಇವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

07/10/2022 09:35 am

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ