ಮಲೈ: ಮಲ್ಪೆ ಸಮುದ್ರದಲ್ಲಿ ಈಜಾಡಲು ಹೋಗಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಬೀಚ್ ನ ಜೀವ ರಕ್ಷಕ ತಂಡ ರಕ್ಷಿಸಿದ ಘಟನೆ ರವಿವಾರ ಸಂಜೆ ನಡೆದಿದೆ.
ಸಕಲೇಶಪುರದ ಅವಿನಾಶ್ (26) ಮತ್ತು ಸಾಗರ್ (27) ಅವರು ಬೀಚ್ ನ ನೀರಿಗಿಳಿದು ಈಜಾಡತೊಡಗಿದ್ದರು. ಕಡಲ ಅಲೆಗಳಿಗೆ ಅವರಿಬ್ಬರು ಕೊಚ್ಚಿಕೊಂಡು ಹೋಗುವವರಿದ್ದರು. ತತ್‌ಕ್ಷಣ ಬೀಚ್‌ನ ಜೀವರಕ್ಷಕರು ಧಾವಿಸಿ ಬಂದು ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದರು. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮುದ್ರ ತೀರದಲ್ಲಿ ನೆಟ್ ಅಳವಡಿಸದಿದ್ದುರಿಂದ ಆ ಭಾಗದಲ್ಲಿ ಅವರು ಜೀವರಕ್ಷಕ ತಂಡದವರ ಎಚ್ಚರಿಕೆಯನ್ನು ಧಿಕ್ಕರಿಸಿ ನೀರಿಗಿಳಿದಿದ್ದರು.
Kshetra Samachara
12/09/2022 12:55 pm