ಉಡುಪಿ: ನಾಡಿನ ಹಿರಿಯ ನೇತಾರ ಆಹಾರ ಮತ್ತು ನಾಗರಿಕ ಪೊರೈಕೆ , ಹಾಗೂ ಅರಣ್ಯ ಮಂತ್ರಿ ಉಮೇಶ ವಿ ಕತ್ತಿಯವರ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.9 ಬಾರಿ ಹುಕ್ಕೇರಿಯಿಂದ ಸ್ಪರ್ಧಿಸಿ 8 ಬಾರಿ ಅವರು ಗೆದ್ದಿರುವುದು ಅವರ ಮೇಲೆ ಜನರಿಟ್ಟ ಪ್ರೀತಿಗೆ ಸಾಕ್ಷಿ .
ಇತ್ತೀಚೆಗಷ್ಟೇ ಉಡುಪಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮಾರಕ ಸ್ಮೃತಿ ವನಕ್ಕೆ ಶಿಲಾನ್ಯಾಸ ನೆರವೇರಿಸಿ ಶುಭ ಕೋರಿ ಅತೀ ಶೀಘ್ರದಲ್ಲಿ ಈ ಕಾರ್ಯ ಮುಗಿದು ಉದ್ಘಾಟನೆ ಗೂ ಆಗಮಿಸುವುದಾಗಿ ತಿಳಿಸಿದ್ದರು . ಆದರೆ ಈಗ ಅವರೇ ಹಠಾತ್ ಅಗಲಿರುವ ವಿಷಯ ತಿಳಿದು ತೀವ್ರ ವಿಷಾದವಾಗಿದೆ. ಅವರ ಆತ್ಮಕ್ಕೆ ಸದ್ಗತಿಯನ್ನು ಹಾಗೂ ಅವರ ಕುಟುಂಬಿಕರಿಗೆ ಈ ವಿಯೋಗದ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀ ಕೃಷ್ಣ ಪರಮಾತ್ಮನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Kshetra Samachara
07/09/2022 08:56 am