ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ರೈಲ್ವೆ ಸೇತುವೆ ಬಳಿ ಮೃತದೇಹ ಪತ್ತೆ

ಬೈಂದೂರು: ಕೋಟೆಮನೆ ರೈಲ್ವೆ ಸೇತುವೆ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿರುವ 40-45 ವಯಸ್ಸಿನ ಅಪರಿಚಿತ ಗಂಡಸಿನ ದೇಹ ಪತ್ತೆಯಾಗಿದೆ. ವ್ಯಕ್ತಿ ಮಾಸಲು ಹಳದಿ ಬಣ್ಣದ ಅರ್ಧ ತೋಳಿನ ಟೀಶರ್ಟ್ ಮೇಲೆ ಕಪ್ಪು ಬಣ್ಣದ ಅರ್ಧ ತೋಳಿನ ಶರ್ಟ್ ಹಾಗೂ ಖಾಕಿ ಬಣ್ಣದ ಬರ್ಮುಡಾ ಧರಿಸಿದ್ದಾರೆ.

ಬಲಕೈಯಲ್ಲಿ ಕೆಂಪು ಬಣ್ಣದ ಮಣಿ ಇರುವ ಎರಡು ರಾಖಿ ಇದೆ. ಈತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲದ ಕಾರಣ ಈ ಚಹರೆವುಳ್ಳ ಅಪರಿಚಿತ ವ್ಯಕ್ತಿಯ ಬಗ್ಗೆ ತಿಳಿದವರಿದ್ದಲ್ಲಿ ಬೈಂದೂರು ಠಾಣಿ (08254-251033-31) ಸಂಪರ್ಕಿಸುವಂತೆ ಠಾಣಾಧಿಕಾರಿ ಮನವಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

26/08/2022 02:50 pm

Cinque Terre

1.36 K

Cinque Terre

0

ಸಂಬಂಧಿತ ಸುದ್ದಿ