ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ಪರೋಟ ವ್ಯಾಪಾದಲ್ಲಿ ನಷ್ಟ; ಮನನೊಂದ ವ್ಯಕ್ತಿ ಆತ್ಮಹತ್ಯೆ!

ಕೋಟ: ಪರೋಟ ವ್ಯಾಪಾರ ಮಾಡುತ್ತಿದ್ದ ವ್ತಕ್ತಿಯೊಬ್ಬರು ವ್ಯಾಪಾರದಲ್ಲಿ ನಷ್ಟ ಸಂಭವಿಸಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಟ ಠಾಣೆ ವ್ಯಾಪ್ತಿಯ ಕಾರ್ಕಡ ಭಟ್ರಕಟ್ಟೆ ನಿವಾಸಿ ಸುಧಾಕರ ಪೂಜಾರಿ (43) ಆತ್ಮಹತ್ಯೆ ಮಾಡಿಕೊಂಡವರು. ಇವರು ಪರೋಟ ವ್ಯಾಪಾರ ಮಾಡಿಕೊಂಡಿದ್ದು, ಸಾಲ ಮಾಡಿದ್ದರು.ಕಳೆದ ಮೂರು ವರ್ಷಗಳಿಂದ ವ್ಯಾಪಾರ ಸರಿಯಾಗಿ ಆಗದೆ ನಷ್ಟ ಅನುಭವಿಸಿ, ಸಾಲದಿಂದ ತೊಂದರೆ ಅನುಭವಿಸುತ್ತಿದ್ದರು.

ಇದೇ ವಿಚಾರದಲ್ಲಿ ಮನನೊಂದ ಅವರು, ಪರೋಟ ಮಾಡುವ ಶೆಡ್‌ನ ಕಿಟಕಿಯ ಸರಳಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

12/07/2022 05:46 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ