ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಿಕ್ಷೆ ಬೇಡಿದ ಹಣ್ಣವನ್ನು ದೇವಸ್ಥಾನದ ಅನ್ನದಾನಕ್ಕೆ ನೀಡಿ ವೃದ್ದೆ

ಕುಂದಾಪುರ: ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೋಡು ನಿವಾಸಿ 80 ವರ್ಷ ಪ್ರಾಯದ ಅಶ್ವಥಮ್ಮ ಎನ್ನುವವರು ಭಿಕ್ಷೆ ಬೇಡಿ ಸಂಗ್ರಹಿಸಿದ 1 ಲಕ್ಷ ರೂಪಾಯಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅನ್ನದಾನ ನಿಧಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಈಕೆಯ ಇಬ್ಬರು ಮಕ್ಕಳನ್ನು ಕಳೆದುಕೊಂಡು ಮೊಮ್ಮಕ್ಕಳೊಂದಿಗೆ ಜೀವನ ನೆಡೆಸುತ್ತಿದ್ದು,ಬೆಳಿಗ್ಗೆಯಿಂದ ಸಂಜೆವರೆಗೆ ಭಿಕ್ಷೆ ಬೇಡಿ ಆ ಹಣವನ್ನು ಪಿಗ್ಮಿಯಲ್ಲಿ ಜಮಾ ಮಾಡಿ ನಂತರ ಆ ಒಟ್ಟು ಹಣವನ್ನು ದೇವಸ್ಥಾನಕ್ಕೆ ದೇಣಿಗೆ ನೀಡುತ್ತಾರೆ. ಇಲ್ಲಿಯವರೆಗೆ ಸರಿಸುಮಾರು 6 ಲಕ್ಷ ರೂಪಾಯಿಯನ್ನು ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ.

ಈ ಬಗ್ಗೆ ಅಜ್ಜಿಯನ್ನು ಕೇಳಿದರೆ ಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು ಹಸಿದ ಹೊಟ್ಟೆಯಲ್ಲಿ ಯಾರೂ ಇರಬಾರದು ಎಂದು ಉತ್ತರಿಸುತ್ತಾರೆ. ಒಟ್ಟಾರೆ 80 ರ ಇಳಿವಯಸ್ಸಿನಲ್ಲೂ ಬಿಕ್ಷಾಟನೆ ಮೂಲಕ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬಂತೆ ಬದುಕುತ್ತಿರುವುದು ನಿಜಕ್ಕೂ ಆಶ್ಚರ್ಯ ತರಿಸುವಂತಿದೆ.

Edited By : PublicNext Desk
Kshetra Samachara

Kshetra Samachara

23/04/2022 03:42 pm

Cinque Terre

1.67 K

Cinque Terre

1

ಸಂಬಂಧಿತ ಸುದ್ದಿ