ಉಡುಪಿ: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಯೋಗೇಶ್ ಪೂಜಾರಿ, ಲಕ್ಷ್ಮೀನಗರ ತೆಂಕನಿಡಿಯೂರು ಅವರ ವಾರೀಸುದಾರರಿಗೆ ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 1 ಲಕ್ಷ ರೂ. ಮೊತ್ತ ಮಂಜೂರಾಗಿದ್ದು, ಶಾಸಕ ರಘುಪತಿ ಭಟ್ ಅವರು ಯೋಗೀಶ್ ಪೂಜಾರಿ ಅವರ ಮನೆಗೆ ತೆರಳಿ ಅವರ ತಂಗಿ ಸುಲಕ್ಷ ಅವರಿಗೆ ಚೆಕ್ ವಿತರಿಸಿದರು.
ಈ ಸಂದರ್ಭ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಪ್ರಕಾಶ್, ತಾಪಂ ಉಪಾಧ್ಯಕ್ಷ ಶರತ್ ಬೈಲಕೆರೆ, ಪಂ. ಸದಸ್ಯರಾದ ಪ್ರದೀಪ್ ಶೆಟ್ಟಿ, ಪುಷ್ಪಾ, ಸ್ಥಳೀಯರಾದ ಸುನಂದ ಶೆಟ್ಟಿ, ರಂಜಿತ್ ಶೆಟ್ಟಿ, ಹರೀಶ್ ಲಕ್ಷ್ಮೀನಗರ, ಸುಧಾಕರ ಪೂಜಾರಿ ಉಪಸ್ಥಿತರಿದ್ದರು.
Kshetra Samachara
09/02/2021 12:38 pm