ಉಡುಪಿ:ಕನ್ನಡದ ಹೆಮ್ಮೆ - ಕಣ್ಣರಳಿಸಿ ನೋಡೊಮ್ಮೆ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ನೂತನ ಆಡಳಿತ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಮಾಡಲಾಗಿದೆ.
ಉಡುಪಿ ಜಿಲ್ಲೆ ಬೈಂದೂರ್ ತಾಲೂಕಿಗೆ ಸಮೀಪದ ತಗ್ಗರ್ಸೆ ಗ್ರಾಮದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯರಿಗೆ ಅವಿರತ ಸೇವೆ ಸಲ್ಲಿರುತ್ತಿದ್ದಾರೆ ಅವರು ಪ್ರತಿಷ್ಠಿತ “ಐ.ಸಿ.ಸಿ ಕತಾರ್ ನ (ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನ ) 2021 - 22 ರ ಸಾಲಿನ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಶೀಯುತರು ಅನೇಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡದ್ದಲ್ಲದೆ, ಕರ್ನಾಟಕ ಸಂಘ ಕತಾರ್ ನ ಉಪಾಧ್ಯಕ್ಷರಾಗಿ, ಐ ಸಿ ಬಿ ಫ್ ನ ಸಹ ಕಾರ್ಯದರ್ಶಿಯಾಗಿ ಅನೇಕ ಭಾರತೀಯರ ಮೆಚ್ಚುಗೆ ಗಳಿಸಿದ್ದಾರೆ.
ಕೋವಿಡ್ -19 ತನ್ನ ರುದ್ರ ತಾಂಡವವಾಡುತ್ತಿದ್ದ ವೇಳೆಯಲ್ಲಿ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ತನ್ನ ಜೀವದ ಹಂಗು ತೊರೆದು ಅನೇಕ ಭಾರತೀಯರಿಗೆ ಸಕಾಲ ನೆರವನ್ನು ನೀಡಿರುವುದು ಜನರ ಪ್ರಶಂಶೆಯನ್ನು ಗಳಿಸಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ, ಕತಾರಿನ ಭಾರತೀಯ ರಾಯಭಾರ ಕಛೇರಿ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ "ಡಿಜಿಪೋಲ್" ಮೂಲಕ ಭಾರತೀಯ ವಲಸಿಗ ಸಮುದಾಯದ ಸರ್ವೋಚ್ಚ ಅಂಗಸಂಸ್ಥೆಯ ಚುನಾವಣೆ ನಡೆಸಲಾಯಿತು. ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯಲ್ಲಿ ಹಸ್ತಚಾಲಿತ ಮತದಾನ ಮತ್ತು ಸಾಮೂಹಿಕ ಒಟ್ಟುಗೂಡಿಸುವಿಕೆಯನ್ನು ತಪ್ಪಿಸಲು ಇದನ್ನು ಕೈಗೆತ್ತಿಕೊಳ್ಳಲಾಯಿತು . ಚುನಾವಣಾ ಪ್ರಕ್ರಿಯೆಯು ದೋಷರಹಿತವಾಗಿದ್ದು, 95% ಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಹಾಗೂ ಭಾಗವಹಿಸುವಿಕೆಯೊಂದಿಗೆ ದೊಡ್ಡ ಯಶಸ್ಸನ್ನು ಕಂಡಿತು.
ನ್ಯಾಯಯುತವಾಗಿ ಚುನಾವಣೆಗಳನ್ನು ನಡೆಸುವಲ್ಲಿ ಭಾರತೀಯ ರಾಯಭಾರ ಕಚೇರಿಯು ಉತ್ತಮವಾಗಿ ನಿರ್ವಹಿಸಿದ ಕೆಲಸಕ್ಕೆ ಸರ್ವಾಂಗೀಣ ಅಂಗೀಕಾರ ಮತ್ತು ಮೆಚ್ಚುಗೆ ವ್ಯಕ್ತಪಡಿಸಿತು. ಸಮಯದ ಮುಕ್ತಾಯದ ನಂತರ 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಫಲಿತಾಂಶಗಳನ್ನು ಘೋಷಿಸಲಾಯಿತು.
ಸರ್ವೋಚ್ಚ ಸಂಸ್ಥೆಗಳಲ್ಲೊಂದಾದ, ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನ (ಐಸಿಸಿ) ನೂತನ ಅಧ್ಯಕ್ಷರಾಗಿ ಶ್ರೀ ಪಿ.ಎನ್. ಬಾಬುರಾಜನ್ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿತು. ಭಾರತದ ರಾಯಭಾರ ಕಛೇರಿಯ ಸಮಾಲೋಚನೆ ಮತ್ತು ಅನುಮೋದನೆಯ ನಂತರ, ಜನವರಿ 27, 2021 ರಂದು, ಮೊದಲ ಐಸಿಸಿ ನಿರ್ವಹಣಾ ಸಮಿತಿ ಸಭೆ ನಡೆಸಿ ನಿಯೋಜಿತ ಸ್ಥಾನಗಳನ್ನು ಘೋಷಿಸಲಾಯಿತು.
ಉಪಾಧ್ಯಕ್ಷರಾಗಿ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಕೃಷ್ಣಕುಮಾರ್ ಬಂಧಕವಿ, ಕಾರ್ಯದರ್ಶಿಯಾಗಿ ಶ್ರೀ ಸುಧೀರ್ ಗುಪ್ತಾ, ಹಣಕಾಸು ಮುಖ್ಯಸ್ಥರಾಗಿ ಶ್ರೀ ಅರ್ಷದ್ ಅಲಿ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿ ಶ್ರೀ ಅನೀಶ್ ಜಾರ್ಜ್ ಮ್ಯಾಥ್ಯೂ, ಸಾಂಸ್ಕೃತಿಕ ಚಟುವಟಿಕೆಗಳ ಮುಖ್ಯಸ್ಥೆಯಾಗಿ ಶ್ರೀಮತಿ ಶ್ವೇತಾ ಕೋಷ್ಟಿ , ಚಟುವಟಿಕೆ ಮತ್ತು ಶಿಕ್ಷಣ ಸಂಯೋಜಕರಾಗಿ ಶ್ರೀಮತಿ ಕಮಲಾ ಧನ್ಸಿಂಗ್ ಠಾಕೂರ್, ಒಳಾಂಗಣ ಚಟುವಟಿಕೆಗಳ ಮುಖ್ಯಸ್ಥರಾಗಿ ಶ್ರೀ ಮೋಹನ್ ಕುಮಾರ್, ಸಲಹೆಗಾರ ಮತ್ತು ಬಾಹ್ಯ ಕಾರ್ಯಕ್ರಮಗಳ ಮುಖ್ಯಸ್ಥರಾಗಿ ಶ್ರೀ ಅಫ್ಸಲ್ ಅಬ್ದುಲ್ ಮಜೀದ್, ಸಂಬಂಧ ಮತ್ತು ಸದಸ್ಯತ್ವದ ಮುಖ್ಯಸ್ಥರಾಗಿ ಶ್ರೀ ಸಜೀವ್ ಸತ್ಯಶೀಲನ್ ಆಯ್ಕೆ ಆದರು. ವ್ಯವಸ್ಥಾಪನಾ ಸಮಿತಿಯ ಹಂಚಿಕೆಗಳನ್ನು ವಿವಿಧ ಸಾಂಸ್ಥಿಕ ಹುದ್ದೆಗಳಲ್ಲಿ ಹಿನ್ನೆಲೆ ಮತ್ತು ಅನುಭವದ ಆಧಾರದ ಮೇಲೆ ಪರಿಗಣಿಸಲಾಯಿತು.
Kshetra Samachara
02/02/2021 04:19 pm