ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಪಡುಕುಡೂರು ಹಾಲು ಉತ್ಪಾದಕರ ಸಂಘ ನಿರ್ದೇಶಕರ ಚುನಾವಣೆ; ಜಗದೀಶ ಹೆಗ್ಡೆ ತಂಡ ಆಯ್ಕೆ

ಹೆಬ್ರಿ: ತಾಲೂಕಿನ ಪಡುಕುಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ 13 ನಿರ್ದೇಶಕರ ಮಂಡಳಿಗೆ ನಡೆಯಬೇಕಾಗಿದ್ದ ಚುನಾವಣೆಯಲ್ಲಿ ಪ್ರತಿ ಕ್ಷೇತ್ರಕ್ಕೂ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಹಾಲಿ ಅಧ್ಯಕ್ಷರಾದ ಸಹಕಾರಿ ಧುರೀಣ ಪಡುಕುಡೂರು ಜಗದೀಶ ಹೆಗ್ಡೆ ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿದೆ.

ಹೃದಯ ಕುಮಾರ್‌ ಶೆಟ್ಟಿ, ಅಶೋಕ್‌ ಎಂ.ಶೆಟ್ಟಿ, ರವೀಂದ್ರ ಶೆಟ್ಟಿ, ಶ್ರೀಧರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸುಕೇಶ್‌ ಶೆಟ್ಟಿ, ದಿವಾಕರ ಶೆಟ್ಟಿ, ಸುಮತಿ ಪೂಜಾರಿ, ಸುಕನ್ಯಾ, ಸುರೇಶ ಪೂಜಾರಿ, ಪಡುಕುಡೂರು ಜಗದೀಶ ಹೆಗ್ಡೆ, ಸಂತೋಷ ನಾಯ್ಕ್‌ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಜಾತಿಯ ಮೀಸಲು ಸ್ಥಾನಕ್ಕೆ ಯಾರೂ ಸ್ಪರ್ಧಿಸಿಲ್ಲ. ಸಹಕಾರ ಇಲಾಖೆಯ ಜ್ಯೋತಿ ಡಿ. ಚುನಾವಣಾ ಅಧಿಕಾರಿಯಾಗಿದ್ದರು. ಡೇರಿಯ ಕಾರ್ಯದರ್ಶಿ ಶಾರದಾಚಂದ್ರ ಶೆಟ್ಟಿ ಸಹಕರಿಸಿದರು.

Edited By : Nirmala Aralikatti
Kshetra Samachara

Kshetra Samachara

19/01/2021 07:57 pm

Cinque Terre

4.93 K

Cinque Terre

0

ಸಂಬಂಧಿತ ಸುದ್ದಿ