ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಸ್ಸಾಂ ಯುವಕ ಮೃತ್ಯು; ನಾಗರಿಕ ಸಮಿತಿಯಿಂದ ಅಂತ್ಯಸಂಸ್ಕಾರ

ಉಡುಪಿ: ಇಲ್ಲಿನ ವಸತಿ ಸಂಕೀರ್ಣದಲ್ಲಿ ಕಾವಲು ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದು, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ನೇತೃತ್ವದ ತಂಡ ಅಂತ್ಯಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿದ್ದಾರೆ. ಮೃತ ವ್ಯಕ್ತಿಯನ್ನು ಅಸ್ಸಾಂ ರಾಜ್ಯದ ನಿವಾಸಿ ಪ್ರದೀಪ್ (27) ಎಂದು ಗುರುತಿಸಲಾಗಿದೆ.

ಉಡುಪಿ ನಗರ ಠಾಣೆಯ ಮೆಲವಿನ್ ಡಿಸೋಜ ಕಾನೂನು ಪ್ರಕ್ರಿಯೆ ನಡೆಸಿದರು. ಈ ಬಗ್ಗೆ ಸಂಬಂಧಿಕರಿಗೆ ವಿಷಯ ಮುಟ್ಟಿಸಲಾಯಿತಾದರೂ ಅಂತ್ಯಸಂಸ್ಕಾರ ನಡೆಸಲು ಆಸ್ಸಾಂನಿಂದ ಉಡುಪಿಗೆ ಬರಲು ಅಸಹಾಯಕತೆ ಎದುರಾಯಿತು. ಆಗ ಸ್ಪಂದಿಸಿದ ನಗರ ಪೊಲೀಸ್ ಠಾಣೆ, ಮೃತನ ಸಂಬಂಧಿಕರಿಂದ ಮೌಖಿಕ ಹಾಗೂ ಮಿಂಚಂಚೆ ಮೂಲಕ ಒಪ್ಪಿಗೆ ಪಡೆದುಕೊಂಡು, ಗೌರವಯುತವಾಗಿ ಮೃತ ಪ್ರದೀಪನ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದುರುದ್ರ ಭೂಮಿಯಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಅಂತ್ಯಸಂಸ್ಕಾರ ಕಾರ್ಯಗಳು ನಡೆದವು. ಡೋರತಿ ಆಳ್ವ, ಗಿಲ್ಬರ್ಟ್ ಆಳ್ವ, ಯತೀಶ್ ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

13/09/2022 02:05 pm

Cinque Terre

1.92 K

Cinque Terre

0

ಸಂಬಂಧಿತ ಸುದ್ದಿ