ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದ ಖತರ್ನಾಕ್ ಕಳ್ಳ ದಂಪತಿ ಉಡುಪಿಯಲ್ಲಿ ಅರೆಸ್ಟ್

- 202 ಗ್ರಾಂ ಚಿನ್ನ, ಒಂದೂವರಿ ಕೆಜಿ ಬೆಳ್ಳಿ, 2 ಬೈಕ್ ವಶ

ಉಡುಪಿ: ಧಾರವಾಡ, ಉಡುಪಿ ಅಷ್ಟೇ ಅಲ್ಲದೆ ರಾಜ್ಯದ ವಿವಿಧ ಕಡೆ ತಮ್ಮ ಕೈಚಳಕ ತೋರಿದ್ದ ದಂಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಜನತಾನಗರದ ನಿವಾಸಿ ರಾಜು ಪಾಮಡಿ (42) ಹಾಗೂ ಆತನ ಹೆಂಡತಿ ಪದ್ಮಾ ಪಾಮಡಿ (37) ಬಂಧಿತ ಕಳ್ಳ ದಂಪತಿ. ಆರೋಪಿಗಳಿಂದ 202 ಗ್ರಾಂ ಚಿನ್ನ, 1.683 ಕೆಜಿ ಬೆಳ್ಳಿ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಖತರ್ನಾಕ್ ದಂಪತಿ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟಿನ ಜಯರಾಜ್‌ ಶೆಟ್ಟಿ ಅವರ ಮನೆಯಲ್ಲಿ ಸೆಪ್ಟಂಬರ್ ತಿಂಗಳು ಸುಮಾರು 9,88,500 ರೂ. ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿಯನ್ನು ಕಳವು ಮಾಡಿದ್ದರು. ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ರಾಜೇಶ್ ಮೂಲತಃ ಉಡುಪಿಯ ಇಂದ್ರಾಳಿಯವನಾಗಿದ್ದು, ಕಾಪು, ಮಣಿಪಾಲಗಳಲ್ಲಿ ಕಳ್ಳತನ ನಡೆಸಿ ಜೈಲು ಸೇರಿದ್ದ. ಜುಲೈನಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡು ಮತ್ತೇ ಪತ್ನಿಯೊಂದಿಗೆ ಕುಂದಾಪುರ, ಸುರತ್ಕಲ್, ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ, ಕಾರಾವಾರಗಳಲ್ಲಿ ಮನೆ ಹಾಗೂ ದೇವಸ್ಥಾನ ಕಳವು ಮಾಡಿದ್ದಾನೆ ಎಂದು ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್ ಮಾಹಿತಿ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

16/11/2020 07:47 am

Cinque Terre

82.31 K

Cinque Terre

2

ಸಂಬಂಧಿತ ಸುದ್ದಿ