ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಕ್ಯಾನ್ಸರ್ ಡೇ ಕೇರ್ ಸೆಂಟರ್ ಕಾರ್ಯಾರಂಭ

ಉಡುಪಿ: ಮಂಗಳೂರಿನಲ್ಲಿ ಕಳೆದ 12 ವರ್ಷಗಳಿಂದ ಕ್ಯಾನ್ಸರ್ ರೋಗಿಗಳ ಆಶಾಕಿರಣವಾಗಿ, ಬಡವರು ಸೇರಿದಂತೆ ಎಲ್ಲಾ ರೀತಿಯ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಿ ಜಪ್ರಿಯಗೊಂಡಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿಯ ಕ್ಯಾನ್ಸರ್ ಡೇ ಕೇರ್ ಸೆಂಟರ್ ಉಡುಪಿಯಲ್ಲಿ ಕಾರ್ಯಾರಂಭ ಮಾಡಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಸುರೇಶ್ ರಾವ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳಿಗೆ ಮಾತ್ರ ಮೀಸಲಾದ ಈ ಆಸ್ಪತ್ರೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೋಗಿಗಳಿಗೆ ಅನುಕೂಲವಾಗಲಿದೆ. ಎಂಐಓ ಮಂಗಳೂರು ಕೇಂದ್ರದ ಎಲ್ಲಾ ಸೇವೆಗಳು ಇಲ್ಲೂ ಲಭ್ಯವಿರಲಿವೆ. ಅಲ್ಲಿನ ಹಿರಿಯ ಕ್ಯಾನ್ಸರ್ ತಜ್ಞವೈದ್ಯರು ರೋಗಿಗಳ ಸಂದರ್ಶನಕ್ಕೆ ಪ್ರತಿದಿನ ಇಲ್ಲೂ ಲಭ್ಯರಿರಲಿದ್ದಾರೆ. ರೋಗಿಯ ಕುಟುಂಬದವರು ಇಲ್ಲಿಯೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬಹುದು ಎಂದರು.

20 ಹಾಸಿಗೆಯುಳ್ಳ ಸುಸಜ್ಜಿತ ಡೇ ಕೇರ್ ಸೆಂಟರ್ ಇದಾಗಿದ್ದು, ಇಲ್ಲಿ ಸುಸಜ್ಜಿತ ಪ್ರಯೋಗಾಲಯ, ನುರಿತ ಶುಶ್ರೂಷಕರು, ಸಿಬ್ಬಂದಿ ವರ್ಗವಿದ್ದು, ಅಕ್ಕರೆಯ ಆರೈಕೆಯೊಂದಿಗೆ ಆಧುನಿಕ ಚಿಕಿತ್ಸಾ ಸೌಲಭ್ಯ ಲಭ್ಯವಿದೆ. ಎಂಐಓ ಉಡುಪಿ ಡೇ ಕೇರ್‌ನಲ್ಲಿ ಪ್ರಮುಖ ಕ್ಯಾನ್ಸರ್ ಚಿಕಿತ್ಸೆಗಳಾದ ಕೀಮೋಥೆರಪಿ, ಇಮ್ಯೂನೋಥೆರಪಿ, ಟಾರ್ಗೆಟೆಡ್ ಥೆರಪಿ ಸೇರಿದಂತೆ ಶೇ.೮೫ರಷ್ಟು ಚಿಕಿತ್ಸೆಗಳನ್ನು ಒಳರೋಗಿಯಾಗಿ ದಾಖಲಾಗದೇ ಡೇ ಕೇರ್‌ನಲ್ಲಿ ಪಡೆಯಬಹುದು ಎಂದರು.

ಬಡ ಕುಟುಂಬದ ಕ್ಯಾನ್ಸರ್ ರೋಗಿಗಳು ಇಲ್ಲೂ ಸರಕಾರದ ಯೋಜನೆಗಳಡಿ ಉಚಿತ ಅಥವಾ ಅತೀ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಪಡೆಯಬಹುದು. ಮಂಗಳೂರು ಕೇಂದ್ರದಲ್ಲಿ ಶೇ.70ರಷ್ಟು ಬಿಪಿಎಲ್ ಕುಟುಂಬದ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Edited By : PublicNext Desk
Kshetra Samachara

Kshetra Samachara

12/08/2022 06:13 pm

Cinque Terre

1.18 K

Cinque Terre

0

ಸಂಬಂಧಿತ ಸುದ್ದಿ