ಉಡುಪಿ: ಇಂದು ಬೆಳಿಗ್ಗೆ ಹೊತ್ತು ಹುಚ್ಚು ನಾಯಿಯೊಂದು ಹಲವು ಮಂದಿಗೆ ಕಚ್ಚಿ ಗಾಯಗೊಳಿಸಿದ್ದು ಇಬ್ಬರಿಗೆ ತೀವ್ರ ಗಾಯಗಳಾಗಿವೆ. ವಿಶು ಶೆಟ್ಟಿ ಅಂಬಲಪಾಡಿಯವರು ತೀವ್ರ ಗಾಯಗೊಂಡ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಶಾಲಾ ಪ್ರಾರಂಭದ ಸಮಯದಲ್ಲಿ ಇಂತಹ ಘಟನೆ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.
ಆದಿ ಉಡುಪಿ ಪರಿಸರದಲ್ಲಿ ಈ ಘಟನೆ ಸಂಭವಿಸಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ.ಈ ಹುಚ್ಚುನಾಯಿಯಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ನಾಯಿಯನ್ನು ಕೊಂದು ಹೆಚ್ಚಿನ ಅಪಾಯವನ್ನು ತಪ್ಪಿಸಲಾಯಿತು.
ಈ ಹುಚ್ಚು ನಾಯಿ ಹಲವು ಬೀದಿ ನಾಯಿಗಳಿಗೂ ಕಡಿದಿದ್ದು ಮುಂದಿನ ದಿನಗಳಲ್ಲಿ ಅನಾಹುತದ ಭೀಕರತೆಯ ಬಗ್ಗೆ ಸೂಕ್ತ ಕ್ರಮ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆ ಕ್ರಮ ಕೈಗೊಳ್ಳಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.
Kshetra Samachara
18/05/2022 02:25 pm