ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಉಚಿತ ವಸತಿ, ಪೌಷ್ಟಿಕ ಆಹಾರ, ಸಮಾಲೋಚನೆ ಕೇಂದ್ರ ಉದ್ಘಾಟನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ ಮತ್ತು ಕಸ್ತೂರ್ಬಾ ಆಸ್ಪತ್ರೆ, ಮಾಹೆ  ಮಣಿಪಾಲದ ಮಕ್ಕಳ ರಕ್ತಶಾಸ್ತ್ರ  ಮತ್ತು ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ ಆಕ್ಸೆಸ್‌ಲೈಫ್  ಮಾಹೆ  ಮಣಿಪಾಲ ಕೇಂದ್ರವನ್ನು (ಕ್ಯಾನ್ಸರ್ ಪೀಡಿತ ಮಕ್ಕಳು ಮತ್ತು ಅವರ ಆರೈಕೆದಾರರಿಗಾಗಿ ಹೋಮ್ ಆವೇ ಫ್ರಮ್ ಹೋಮ್) ಇಂದು ಉದ್ಘಾಟಿಸಲಾಯಿತು.

ಇದು ಕ್ಯಾನ್ಸರ್ ಇರುವ ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಉಚಿತವಾಗಿ  ವಸತಿ, ಪೌಷ್ಟಿಕ ಆಹಾರ, ಸಮಾಲೋಚನೆ ಮತ್ತು ಶೈಕ್ಷಣಿಕ ಸಹಾಯ ಸೇವೆಗಳನ್ನು ಒದಗಿಸುತ್ತದೆ. ಇದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ  ಮಣಿಪಾಲ ಮತ್ತು ಆಕ್ಸೆಸ್‌ಲೈಫ್‌ನ ಜಂಟಿ ಯೋಜನೆಯಾಗಿದೆ.ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂ ಈ ಎಂ ಜಿ) ಮುಖ್ಯಸ್ಥರಾದ  ಡಾ.ರಂಜನ್ ಆರ್ ಪೈ ಕೇಂದ್ರವನ್ನು ಉದ್ಘಾಟಿಸಿದರು. ಆಕ್ಸೆಸ್‌ಲೈಫ್  ಇದರ ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಗಿರೀಶ್ ನಾಯರ್, ಸಹ-ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ  ಅಂಕೀತ್ ದೇವ್, ಮಾಹೆ ಮಣಿಪಾಲದ ಉಪಕುಲಪತಿಗಳಾದ  ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಗೌರವ ಅತಿಥಿಗಳಾಗಿದ್ದರು. ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆಕ್ಸೆಸ್‌ಲೈಫ್ ಮಾಹೆ ಮಣಿಪಾಲ ಕೇಂದ್ರವು  ಎನರ್ಜಿ ಸೆಲ್ ಎದುರು, ಬಿಕ್ಯೂ ರಸ್ತೆ ಬಳಿ, ಮಾಧವನಗರ, ಮಣಿಪಾಲ ಇಲ್ಲಿ ಕಾರ್ಯಾಚರಿಸಲಿದೆ. ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್, ಭಾರತದ  ಲಾಭರಹಿತ (ಎನ್ ಜಿ ಓ) ನೋಂದಾಯಿತ ಸಂಸ್ಥೆಯಾಗಿದ್ದು , ತಮ್ಮ ಮಗುವಿನ ಕ್ಯಾನ್ಸರ್ ಚಿಕಿತ್ಸೆಗಾಗಿ ಕ್ಯಾನ್ಸರ್ ಕೇಂದ್ರಕ್ಕೆ ಬರುವ ಕುಟುಂಬಗಳಿಗೆ ಬಹುಸೌಲಭ್ಯ ಮತ್ತು ಬೆಂಬಲದ ಆರೈಕೆಯನ್ನು ಒದಗಿಸುತ್ತದೆ.  3 ರಿಂದ 6 ತಿಂಗಳ ಅವಧಿಯವರೆಗೆ ಮತ್ತು ಕೆಲವೊಮ್ಮೆ ಒಂದು ವರ್ಷದ ಅವಧಿಯ ಚಿಕಿತ್ಸೆಯ ಸಂಪೂರ್ಣ ಅವಧಿಯಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ವಸತಿ, ನೈರ್ಮಲ್ಯದ ವಾತಾವರಣ, ಪೌಷ್ಟಿಕಾಂಶವುಳ್ಳ  ಊಟ,  ಸಮಾಲೋಚನೆ, ಮನರಂಜನಾ ಮತ್ತು ಶೈಕ್ಷಣಿಕ  ಸಹಾಯ ಸೌಲಭ್ಯವನ್ನು ಒದಗಿಸುತ್ತದೆ.

Edited By : PublicNext Desk
Kshetra Samachara

Kshetra Samachara

30/04/2022 04:23 pm

Cinque Terre

1.14 K

Cinque Terre

0

ಸಂಬಂಧಿತ ಸುದ್ದಿ