ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಅನಾಥಾಶ್ರಮದ ಅನಾಥ ವ್ಯಕ್ತಿಗೆ ಗೌರವಯುತ ಅಂತ್ಯಸಂಸ್ಕಾರ

ಮಣಿಪಾಲ:ಇಲ್ಲಿನ ಹೊಸಬೆಳಕು ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ವೃದ್ಧರನ್ನು ಆಶ್ರಮದ ಸಂಚಾಲಕರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ವೃದ್ದರು ಮೃತಪಟ್ಟಿದ್ದರು. ಶವವನ್ನು ವಾರಸುದಾರರ ಬರುವಿಕೆಗಾಗಿ ಆಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತು. ಸಮಯ ಮಿತಿ ಕಳೆದರೂ ಸಂಬಂಧಿಕರು ಸಂಪರ್ಕಿಸದೆ ಇರುವುದರಿಂದ ಹೊಸಬೆಳಕು ಆಶ್ರಮ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ವೃದ್ಧರ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ಸೋಮವಾರ ನಡೆಸಿತು.

ಹೊಸಬೆಳಕು ಆಶ್ರಮ ಸಂಚಾಲಕರಾದ ತನುಲಾ ತರುಣ್, ವಿನಯಚಂದ್ರ ಸಾಸ್ತಾನ, ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಹಾಗೂ ವಿಶ್ವನಾಥ ಶೆಟ್ಟಿ ಅಮಾಸೆಬೈಲು ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಫ್ಲವರ್ ವಿಷ್ಣು ಸಹಕರಿಸಿದರು.

Edited By : PublicNext Desk
Kshetra Samachara

Kshetra Samachara

28/03/2022 04:56 pm

Cinque Terre

2.59 K

Cinque Terre

0

ಸಂಬಂಧಿತ ಸುದ್ದಿ