ಕುಂದಾಪುರ: ಕುಂದಾಪುರ ತಾಲೂಕಿನ ಹಾರಾಡಿ ಎಂಬಲ್ಲಿ ಮಹಿಳೆಯೊಬ್ಬರು ಇವತ್ತು 108 ಆಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಸ್ಥಳೀಯ ನಂದಿನಿ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ 108 ಆಂಬುಲೆನ್ಸ್ ಕರೆಸಲಾಯಿತು. ಆಂಬುಲೆನ್ಸ್ ನಲ್ಲಿ ಹೋಗುವಾಗ ದಾರಿಮಧ್ಯೆ ಮಹಿಳೆಗೆ ಹೆರಿಗೆ ನೋವು ಜಾಸ್ತಿಯಾಗಿದೆ.
ಬಳಿಕ ಆಕೆ ಆಂಬುಲೆನ್ಸ್ ಒಳಗೇ ಮಗುವಿಗೆ ಜನ್ಮ ನೀಡಿದ್ದಾಳೆ. ಅದರಲ್ಲಿದ್ದ ನರ್ಸ್ ಸಹಕಾರದಿಂದ ಹೆರಿಗೆ ಸುಸೂತ್ರವಾಗಿ ನಡೆದಿದೆ. ಬಳಿಕ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಬಾಣಂತಿ ಮತ್ತು ಮಗುವನ್ನು ಪರೀಕ್ಷಿಸಿದ ಬಳಿಕ ವೈದ್ಯಾಧಿಕಾರಿಗಳು ಇಬ್ಬರೂ ಆರೋಗ್ಯವಾಗಿರುವುದಾಗಿ ಖಚಿತಪಡಿಸಿದರು.
Kshetra Samachara
18/12/2021 06:31 pm