ಕುಂದಾಪುರ: ಮನುಷ್ಯರಿಗೆ ತಮ್ಮ ಆರೋಗ್ಯ ಕಾಪಾಡುವುದೇ ಒಂದು ಸವಾಲು. ನಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮುಖ್ಯವಾಗಿ ಕೊಬ್ಬಿನ ಪದಾರ್ಥಗಳನ್ನು ವರ್ಜಿಸಬೇಕು ಎಂದು ಬ್ಲಾಕ್ ಹೆಲ್ತ್ ಎಜ್ಯುಕೇಶನ್ ಅಧಿಕಾರಿ ಭಾಗ್ಯಲಕ್ಷ್ಮಿ ಹೇಳಿದರು.
ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೋಡಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ "ನೇತ್ರದಾನ ಮಾಹಿತಿ ಕಾರ್ಯಾಗಾರ"ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಉಮೇಶ್ ನಾಯಕ್ ಪ್ರಾಸ್ತಾವಿಸಿದರು. ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಸಲಹಾ ಮಂಡಳಿ ಸದಸ್ಯ ಹಾಜಿ ಅಬುಷೇಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ಬಿ.ಸಿ.ಎ ವಿದ್ಯಾರ್ಥಿ ಸುಮಂತ್ ವಂದಿಸಿ, ಪ್ರಥಮ ಬಿ.ಕಾಂ ಮುಝಮ್ಮಿಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
12/09/2022 10:02 pm