ಕಾರ್ಕಳ : ಅಕ್ರಮ ಗಣಿಗಾರಿಕೆಯಿಂದ ಮನೆಗಳಿಗೆ ಹಾನಿಯಾಗುತ್ತಿದೆ ಶೀಘ್ರ ಕ್ರಮ ಕೈಗೊಳ್ಳಲು ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ತಾಲೂಕಿನ ಪಿಲಾರು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಇದರಿಂದಾಗಿ ಸ್ಥಳೀಯ ಮನೆಗಳಿಗೆ ತೊಂದರೆಯಾಗುತ್ತಿದೆ. ಸ್ಪೋಟಕ ಬಳಸಿದ ಪರಿಣಾಮ ಈಗಾಗಲೇ ಕೆಲವು ಮನೆಗಳ ಗೋಡೆಗಳಿಗೆ ಹಾನಿಯಾಗಿದ್ದು, ಬಿರುಕುಬಿಟ್ಟಿವೆ.
ಶೀಘ್ರವೇ ಈ ಗಣಿಗಾರಿಕೆ ನಿಲ್ಲಿಸಬೇಕು ಇಲ್ಲವಾದ್ರೆ ಮತ್ತಷ್ಟು ಹಾನಿ ಸಂಭವಿಸುವ ಸಾಧ್ಯತೆ ಇದೆ.
ಜೊತೆಗೆ ಪ್ರಾಣ ಹಾನಿಯೂ ಸಂಭವಿಸುವ ಸಾಧ್ಯತೆಗಳಿವೆ ಹಾಗಾಗಿ ಸೂಕ್ತ ಕ್ರಮಕ್ಕಾಗಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ.
Kshetra Samachara
20/10/2020 02:03 pm