ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣನಗರಿಯಲ್ಲಿ ಕಂಟ್ರೋಲ್ ಗೆ ಬರುತ್ತಿದೆ ಕೊರೊನಾ : ತಿಂಗಳಲ್ಲಿ ಒಂದು ಸಾವಿಲ್ಲ

ಉಡುಪಿ: ಡೆಡ್ಲಿ ಸೋಂಕು ಕೊರೊನಾ ತನ್ನ ಕಂಟ್ರೋಲ್ ಕಳೆದುಕೊಳ್ಳುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಕಳೆದ 31 ದಿನಗಳಲ್ಲಿ ಯಾವುದೇ ಸಾವು ನೋವಿಲ್ಲ, ಮರಣ ಪ್ರಮಾಣ ದರ ಶೇ.0.81ಕ್ಕೆ ಇಳಿಕೆಯಾಗಿದೆ.

ರಾಜ್ಯದ ಕೇವಲ 5 ಜಿಲ್ಲೆಗಳಲ್ಲಷ್ಟೇ ಸೋಂಕಿನ ಪ್ರಕರಣ 10 ಸಾವಿರಕ್ಕಿಂತ ಕಡಿಮೆಯಿದೆ.

20 ಸಾವಿರಕ್ಕಿಂತ ಅಧಿಕ ಸೋಂಕು ಪ್ರಕರಣವುಳ್ಳ 12 ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಅತಿ ಕಡಿಮೆ ಮರಣ ಪ್ರಮಾಣವಿದೆ.

ಕೋವಿಡ್ ಸೋಂಕಿನಿಂದ ಅತ್ಯಧಿಕ ಸಾವು: ಬೆಂಗಳೂರು ನಗರ(4,197), ಮೈಸೂರು(1,002), ದಕ್ಷಿಣ ಕನ್ನಡ(724), ಧಾರವಾಡ(603), ಬಳ್ಳಾರಿ(586.

ಅತಿ ಕಡಿಮೆ ಸಾವು: ಯಾದಗಿರಿ(61), ಕೊಡಗು(68), ರಾಮನಗರ(75), ಚಿತ್ರದುರ್ಗ(66) ದಾಖಲಾಗಿದೆ.

ಉಡುಪಿ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಶೇ. 8.81ರಷ್ಟಿದೆ.

13 ಲಕ್ಷ ಜನಸಂಖ್ಯೆಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ತಪಾಸಣೆ ಪ್ರಮಾಣ(2,58,691) ಒಂದು ಲಕ್ಷ ಜನಸಂಖ್ಯೆಗೆ 19,899ರಷ್ಟಿದೆ.

ನೆಗೆಟಿವಿಟಿ ಪ್ರಮಾಣ ಶೇ.91.18ರಷ್ಟಿದೆ.

ಈ ತನಕ ಕೋವಿಡ್-19 ಆಸ್ಪತ್ರೆಯಿಂದ 22,500 ಮಂದಿ ಬಿಡುಗಡೆಯಾಗಿದ್ದರೆ, ಕೇವಲ 127 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 88 ಐಸಿಯು ಪೈಕಿ ಕೇವಲ ಒಬ್ಬರಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

09/12/2020 05:37 pm

Cinque Terre

13.45 K

Cinque Terre

0

ಸಂಬಂಧಿತ ಸುದ್ದಿ