ಕಾರ್ಕಳ: ದಿನದ 24 ಗಂಟೆಯೂ ಗಡಿಕಾಯುವ ಸೇನೆಯ ಯೋಧರಂತೆ, ಪೌರಕಾರ್ಮಿಕರು ಕೂಡ ನಗರದ ಸ್ವಚ್ಛತೆಯನ್ನು ಕಾಪಾಡುವ ಯೋಧರಾಗಿದ್ದಾರೆ ಎಂದು ಕಾರ್ಕಳ ಪುರಸಭಾ ಅಧ್ಯಕ್ಷ ಸುಮಾ ಕೇಶವ್ ಹೇಳಿದರು.ಅವರು ಶುಕ್ರವಾರ ಕಾರ್ಕಳದ ನಾರಾಯಣ ಗುರು ಸಭಾಂಗಣದಲ್ಲಿ ಪುರಸಭೆ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ ಮಾತನಾಡಿ ಮುಂಜಾನೆ ಜನರು ಏಳುವ ಮುನ್ನವೇ ಪೌರಕಾರ್ಮಿಕರು ನಗರವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ ಸಮಾಜದಿಂದ ಏನನ್ನು ನಿರೀಕ್ಷಿಸದೇ ತಮ್ಮ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸುವ ಪೌರಕಾರ್ಮಿಕರನ್ನು ಗೌರವಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ರೂಪಾ ಶೆಟ್ಟಿ, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ವಸಂತ ಉಪಸ್ಥಿತರಿದ್ದರು.
ಪೌರಕಾರ್ಮಿಕರ ಪರವಾಗಿ ಸುದೇಶ್ ಮಾತನಾಡಿದರು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಪ್ರತಿಮಾ ಸಂತೋಷ ರಾವ್ ಅಶ್ಪಕ್ ಅಹಮದ್ ಮಾತನಾಡಿದರು ಪುರಸಭೆಯ ಮ್ಯಾನೇಜರ್ ಸೂರ್ಯಕಾಂತ ಕಾರ್ವಿ ಸ್ವಾಗತಿಸಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಮುಖ್ಯ ಅಧಿಕಾರಿ ಸಭಾಂಗಣಕ್ಕೆ ಬರಮಾಡಿಕೊಂಡರು ಇದೆ ವೇಳೆ ಪುರಸಭಾ ಸದಸ್ಯರು ಹಾಗೂ ಸಿಬ್ಬಂದಿಗಳು ಪುಷ್ಪ ಅರ್ಚನೆ ಮಾಡುವ ಮೂಲಕ ಪೌರಕಾರ್ಮಿಕರನ್ನು ಬರಮಾಡಿಕೊಂಡಿರುವುದು ವಿಶೇಷವಾಗಿತ್ತುಪೌರ ಕಾರ್ಮಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
Kshetra Samachara
23/09/2022 03:36 pm