ಅದೆಷ್ಟೋ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೇ ಮುಚ್ಚಲ್ಪಡುತ್ತಿವೆ..ಆದರೆ ಬ್ರಹ್ಮಾವರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 584 ಕ್ಕೇರಿದೆ. ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಕುಳಿತು ಪಾಠ ಕೇಳಲು ಕೊಠಡಿ ಹಾಗೂ ಪೀಠೋಪಕರಣ ಕೊರತೆಗಳಿದ್ದು, ಶಾಲೆಯ ಜಗಲಿಯಲ್ಲೇ ಕುಳಿತು ಪಾಠ ಕೇಳುವಂತಾಗಿದೆ.
ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳಲ್ಲಿ ಒಟ್ಟಾರೆ 17 ವಿಭಾಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ವಿಭಾಗಗಳ ಸಂಖ್ಯೆ 19 ಕ್ಕೇರಲಿದೆ. ಹಾಗಾಗಿ ಈ ಶಾಲೆಗೆ ತುರ್ತು 8 ಕೊಠಡಿಗಳ ಅವಶ್ಯಕತೆಯಿದ್ದು, ಶಾಲೆಯಲ್ಲಿ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದಷ್ಟು ಬೇಗನೆ ಸರ್ಕಾರ ಗಮನಹರಿಸುವಂತೆ ಶಾಲೆಯ ಆಡಳಿತ ಮಂಡಳಿ ಮನವಿ ಮಾಡಿದ್ರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ.
Kshetra Samachara
24/03/2022 01:20 pm