ಕಾಪು: ಮುದರಂಗಡಿ ಕೆಳಗಿನ ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಪೇಟೆ ಅಭಿವೃದ್ಧಿಗೊಳಿಸಿ ವೃತ್ತ ನಿರ್ಮಿಸಲಾಗಿತ್ತು. ಆದರೆ, ಮುದಂರಗಡಿ ಗ್ರಾಂಪಂ ನಿಂದ 'ಶ್ರೀ ಐವನ್ ಡಿಸೋಜ ವೃತ್ತ ' ಎಂಬ ನಾಮ ಫಲಕ ಅಳವಡಿಸಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಾರ್ವಜನಿಕರು ನೀಡಿದ ದೂರಿನನ್ವಯ ಲೋಕೋಪಯೋಗಿ ಇಲಾಖೆ ಮುದರಂಗಡಿ ಗ್ರಾಂಪಂ ಪಿಡಿಓ ಗೆ ನೋಟಿಸ್ ನೀಡಿ ಈ ಫಲಕ ತೆರವುಗೊಳಿಸುವಂತೆ ಸೂಚಿಸಿದ್ದರು.
ನೋಟಿಸ್ ನೀಡಿ ತಿಂಗಳುಗಳೇ ಕಳೆದರೂ ಈ ಫಲಕ ಯಥಾ ಸ್ಥಿತಿಯಲ್ಲಿದ್ದ ಕಾರಣ ಲೋಕೋಪಯೋಗಿ ಇಲಾಖೆ ಗ್ರಾಪಂ ಪಿಡಿಓಗೆ ಪುನಃ ನೋಟಿಸ್ ನೀಡಿ ಐವನ್ ಡಿಸೋಜ ಹೆಸರಿನ ಫಲಕ ತೆಗೆಯುವಂತೆ ಸೂಚಿಸಿದ್ದಾರೆ.
ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮೇಲಧಿಕಾರಿಗೆ ತಿಳಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ.
Kshetra Samachara
08/11/2020 11:18 am