ಕಾರ್ಕಳ: ರಂಜಿತ್ ಕಾರ್ಕಳ ಇವರ ನಿರ್ದೇಶನದಲ್ಲಿ ಚಿತ್ರೀಕರಿಸಿದ ಚಕ್ಷುಶ: ಕಿರುಚಲನ ಚಿತ್ರದ ಪ್ರೀಮಿಯರ್ ಶೋ ಇಂದು ವಿಜೇತ ವಿಶೇಷ ಮಕ್ಕಳ ಶಾಲೆಯಲ್ಲಿ, ಸಹಾಯಾರ್ಥವಾಗಿ ವಿಶೇಷ ಮಕ್ಕಳ ಸಮ್ಮುಖದಲ್ಲಿ ತೆರೆಕಂಡಿತು. ಶ್ರೀಮತಿ ಗೀತಾಂಜಲಿ ಸುವರ್ಣ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಗೌರವಾಧ್ಯಕ್ಷರು ಸತ್ಯದ ತುಳುವೆರ್ .ರಿ ಉಡುಪಿ ಮತ್ತು ಭಾಸ್ಕರ್ ಟಿ ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಇವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಪ್ರವೀಣ್ ಬಂಗೇರ ಮಲ್ಪೆ ಅಧ್ಯಕ್ಷರು, ಸತ್ಯದ ತುಳುವೆರ್. ರಿ ,ಚಕ್ಷುಶ: ಚಿತ್ರದ ನಾಯಕ ಅಮಿತ್ ಗಂಗೂರ್, ನಾಯಕಿ ಕು.ರಚನಾ ಶೆಟ್ಟಿ, ನಿರ್ದೇಶಕ ಶ್ರೀ ರಂಜಿತ್ ಶೆಟ್ಟಿ , ರಾಧಾಕೃಷ್ಣ ಶೆಟ್ಟಿ ಅಧ್ಯಕ್ಷರು ದುರ್ಗಾ ವಿದ್ಯಾ ಸಂಘ.ರಿ, ಗುರು ರಾಘವೇಂದ್ರ ಸೇವಾ ಟ್ರಸ್ಟ್ .ರಿ ಸಂಸ್ಥಾಪಕಿ ಡಾ. ಕಾಂತಿ ಹರೀಶ್ ಹಾಗೂ ಟ್ರಸ್ಟಿ ಸಿಯಾ ಸಂತೋಷ್ ನಾಯಕ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಸತ್ಯದ ತುಳುವೆರ್ .ರಿ, ನವಚೇತನ ಬಳಗ ತೋಡಾರು, ವಿಘ್ನೇಶ್ವರ ಫ್ರೆಂಡ್ಸ್ .ರಿ ಮೂಡುಮಾರ್ನಾಡು ಸಂಘಟನೆ ವತಿಯಿಂದ ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು.
Kshetra Samachara
13/01/2021 07:21 pm