ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಿಯ್ಯಾರು ವಲಯ, ಜನಜಾಗೃತಿ ವೇದಿಕೆ ಕಾರ್ಕಳ, ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಮಿಯ್ಯಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಮಕ್ಕಳಿಗೆ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಬಗ್ಗೆ ಸ್ವಾಸ್ತ್ಯ ಸಂಕಲ್ಪ ಕಾರ್ಯ ಕ್ರಮವು ಸೆ 9ರಂದು ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಗಾಯನ. ಎಸ್. ಶೆಟ್ಟಿ ಯವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಜನಜಾಗೃತಿ ವೇದಿಕೆಯ ಶಿಬಿರಾಧಿಕಾರಿ ದೇವಿಪ್ರಸಾದ್ ಅವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಕ್ಕಳ ಮುಂದಿನ ಭವಿಷ್ಯದ ಬದುಕಿನ ಭದ್ರತೆ ಯನ್ನು ರೂಪಿಸಬೇಕಾದರೆ ಉತ್ತಮ ಆರೋಗ್ಯ ಬೇಕು. ಜೊತೆಯಲ್ಲಿ ಕೆಟ್ಟ ವಿಚಾರಕ್ಕೆ ಆಕರ್ಷಿತರಾಗಬಾರದು. ಪ್ರತೀ ಒಬ್ಬರು ಸ್ವಾಮಿ ವಿವೇಕಾನಂದರಾಗಬೇಕು. ದೇಶದ ಸತ್ಪ್ರಜೆಯಾಗಿ ಜಗತ್ತಿನ ಬೆಳಕಾಗಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾರ್ಕಳ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿರುವ ಸುಭಾಶ್ಚಂದ್ರ ಚೌಟ, ಮಕ್ಕಳ ಭವಿಷ್ಯ ರೂಪಿಸುವ ಬಗ್ಗೆ ತಿಳಿಸಿ ಶುಭ ಹಾರೈಸಿದರು.
ಕಾಲೇಜಿನ ಉಪನ್ಯಾಸಕರಾದ ಗಣೇಶ್ ಬರ್ಲಾಯ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕರಾದ ಭರತ್ ರಾಜ್ ಸ್ವಾಗತಿಸಿದರು. ವಲಯದ ಮೇಲ್ವಿಚಾರಕರಾದ ದಿವ್ಯಶ್ರೀ ವಂದಿಸಿದರು. ಮಿಯ್ಯಾರು ಬಿ ಒಕ್ಕೂಟದ ಸೇವಾಪ್ರತಿನಿಧಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು.
Kshetra Samachara
10/09/2022 08:01 am