ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರು ಇಲ್ಲಿನ ಮುಖ್ಯ ಶಿಕ್ಷಕ, ಕಾರ್ಕಳ ತೆಳ್ಳಾರು ನಿವಾಸಿ ಸಂಜೀವ ದೇವಾಡಿಗ ಅವರು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಹಿಂದೆ ಕೆರ್ವಾಶೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯಲ್ಲಿ 8 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಸಂದರ್ಭ ಶಾಲಾ ಹಾಗೂ ಶೈಕ್ಷಣಿಕ ಅಭಿವೃದ್ಧಿ, ಕೊರೋನಾ ಸಂದರ್ಭದಲ್ಲಿ ವಿನೂತನ ಪರಿಕಲ್ಪನೆಯ ಅಕ್ಕನ ಮನೆಪಾಠ ಯೋಜನೆ ಅನುಷ್ಠಾನಗೊಳಿಸಿದ್ದರು. ಸಂಜೀವ ದೇವಾಡಿಗ ಅವರು ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸರಕಾರ ಪ್ರಶಸ್ತಿ ಘೋಷಿಸಿದೆ.
Kshetra Samachara
03/09/2022 04:33 pm