ಕುಂದಾಪುರ: ಇಲ್ಲಿನ ಯುವವಾಹಿನಿ ಯಡ್ತಾಡಿ ಘಟಕದ ಆಶ್ರಯದಲ್ಲಿ, ಸೌಜನ್ಯ ಯುವಕ ಮಂಡಲ, ಶ್ರೀ ವಿನಾಯಕ ಯುವಕ ಮಂಡಲ ಸಹಯೋಗದಲ್ಲಿ ನರೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಬೇಸಿಗೆ ಶಿಬಿರ ತಿರುವಿನ ನಂದಾದೀಪ ಕಾರ್ಯಕ್ರಮವನ್ನು ಸಹಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಶ್ರೀ. ಕೆ. ಕಿರಣ್ ಹೆಗ್ಡೆ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿ, ಬದುಕಿನಲ್ಲಿ ಶಿಕ್ಷಣ ಎನ್ನುವುದು ಸಾಧನೆಯ ಮೊದಲ ಘಟ್ಟ, ಇಂತಹ ಶಿಬಿರಗಳ ಮೂಲಕ ಮಕ್ಕಳ ಪ್ರತಿಭೆಗಳ ಅನಾವರಣದ ಮೂಲಕ ಶಿಸ್ತಿನ ಸಹಬಾಳ್ವೆ ನೆಡೆಸಲು ಸಹಾಯಕವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಯುವವಾಹಿನಿ ಯಡ್ತಾಡಿ ಘಟಕದ ಅಧ್ಯಕ್ಷ ಸೋಮಪ್ಪ ಪೂಜಾರಿ, ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತಾ ದೇವಾಡಿಗ, ರೋಟರಿ ಕ್ಲಬ್ ಅಧ್ಯಕ್ಷ ಚರಣ್ ಬಿ ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
02/05/2022 08:04 am