ಕುಂದಾಪುರ: ಈ ವರ್ಷದ ಆಗಸ್ಟ್ ನಲ್ಲಿ ನಡೆದ NEET ಪರೀಕ್ಷೆಯಲ್ಲಿ ಕುಂದಾಪುರದ ಅತೀಶ್ ಬಿ.ಶೆಟ್ಟಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಅತೀಶ್ ಬಿ. ಶೆಟ್ಟಿ ಕುಂದಾಪುರಸ ಚಿನ್ನಯಿ ಆಸ್ಪತ್ರೆಯ ಸರ್ಜನ್ ಡಾ. ಬಾಲಕೃಷ್ಣ ಶೆಟ್ಟಿ ಹಾಗು ಸುನೀತಾ ಶೆಟ್ಟಿ ಕಂದಾವರ ಇವರ ಪುತ್ರ.
ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸದ ಬಳಿಕ ಪಿಯುಸಿಯಲ್ಲಿ ಸಿ.ಇ.ಟಿ ಪರೀಕ್ಷೆಯಲ್ಲಿ 13ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಅಲ್ಲದೇ ಆಲ್ ಇಂಡಿಯಾ ಮೆಡಿಕಲ್ ಸೂಪರ್ ಸ್ಪೆಷಾಲಿಟಿ NEET, ಎಂಸಿಹೆಚ್, ಪ್ರವೇಶ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ.
ಮಣಿಪಾಲದ ಕೆ.ಎಂ.ಸಿ.ಆಸ್ಪತ್ರೆಯಲ್ಲಿ ಎಂ.ಬಿ.ಬಿ.ಎಸ್ ಮುಗಿಸಿದ ಬಳಿಕ ಬೆಂಗಳೂರಿನ ಬಿ.ಎಂ.ಸಿ. ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್. ಪದವಿ ಪಡೆದಿದ್ದಾರೆ.
Kshetra Samachara
16/09/2022 10:23 pm